ಬೆಂಗಳೂರು: ಮೆಟಾ ಒಡೆತನದ ವಾಟ್ಸ್‌ಆ್ಯಪ್, ಬ್ಯುಸಿನೆಸ್ ಆವೃತ್ತಿ ಬಳಕೆದಾರರಿಗೆ ಪ್ರೀಮಿಯಂ ಚಂದಾ ಪ್ಲ್ಯಾನ್‌ಗಳನ್ನು ಪರಿಚಯಿಸುವುದಾಗಿ ಹೇಳಿದೆ.
ಉಚಿತ ಆವೃತ್ತಿಯಲ್ಲಿ ಬಳಕೆದಾರರಿಗೆ ಸೀಮಿತ ಆಯ್ಕೆಗಳಷ್ಟೇ ದೊರೆಯುತ್ತವೆ. ಆದರೆ ಪ್ರೀಮಿಯಂ ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳುವವರಿಗೆ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಮತ್ತು ಜಾಹೀರಾತು, ಸುಲಭದ ಶಾಪಿಂಗ್ ಆಯ್ಕೆಗಳನ್ನು ಒದಗಿಸಲಿದೆ.
ಉತ್ಪನ್ನಗಳ ಕ್ಯಾಟಲಾಗ್, ಕೊಡುಗೆಗಳ ವಿವರ, ಗ್ರಾಹಕ ಸಂಪರ್ಕದಂತಹ ಆಯ್ಕೆಗಳನ್ನು ಬ್ಯುಸಿನೆಸ್ ಆವೃತ್ತಿಯ ಪ್ರೀಮಿಯಂ ಪ್ಲ್ಯಾನ್‌ನಲ್ಲಿ ದೊರೆಯಲಿದೆ.
ನೂತನ ಬ್ಯುಸಿನೆಸ್ ಪ್ರೀಮಿಯಂ ಆಯ್ಕೆಯನ್ನು ವಾಟ್ಸ್‌ಆ್ಯಪ್, ಡೆಸ್ಕ್‌ಟಾಪ್, ಆ್ಯಂಡ್ರಾಯ್ಡ್ ಮತ್ತು ಐಓಎಸ್‌ನಲ್ಲಿ ಪರಿಶೀಲಿಸುತ್ತಿದೆ ಎಂದು ವಾಬೀಟಾಇನ್ಪೋ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.