ADVERTISEMENT

Whatsapp Update: ವಾರದ ಬಳಿಕ ಮೆಸೇಜ್ ಡಿಲೀಟ್- ಶೀಘ್ರ ಲಭ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2021, 11:32 IST
Last Updated 24 ನವೆಂಬರ್ 2021, 11:32 IST
ವಾರದ ಬಳಿಕ ಮೆಸೇಜ್ ಡಿಲೀಟ್ ಮಾಡುವ ಆಯ್ಕೆ!
ವಾರದ ಬಳಿಕ ಮೆಸೇಜ್ ಡಿಲೀಟ್ ಮಾಡುವ ಆಯ್ಕೆ!   

ಬೆಂಗಳೂರು: ಬಳಕೆದಾರರು ಕಳುಹಿಸಿದ ಮೆಸೇಜ್ ಅನ್ನು ವಾರದೊಳಗೆ ಡಿಲೀಟ್ ಮಾಡುವ ಆಯ್ಕೆಯನ್ನು ವಾಟ್ಸ್‌ಆ್ಯಪ್ ಶೀಘ್ರದಲ್ಲೇ ಒದಗಿಸಲಿದೆ.

ವಾಟ್ಸ್‌ಆ್ಯಪ್ ಮೂಲಕ ಕಳುಹಿಸಲಾಗುವ ಯಾವುದೇ ಮೆಸೇಜ್ ಅನ್ನು ಡಿಲೀಟ್ ಮಾಡುವ ಅವಕಾಶವಿದೆ.

ಆದರೆ ಈಗ ಇರುವ ಆಯ್ಕೆಯಲ್ಲಿ ಒಂದು ಗಂಟೆ, ಎಂಟು ನಿಮಿಷ ಮತ್ತು 16 ಸೆಕೆಂಡ್ ಅವಧಿಯೊಳಗೆ ಮಾತ್ರ ಮೆಸೇಜ್ ಡಿಲೀಟ್ ಮಾಡಬಹುದು.

ADVERTISEMENT

ಈ ಬಗ್ಗೆ ವಾಟ್ಸ್‌ಆ್ಯಪ್ ಪರಿಶೀಲಿಸುತ್ತಿದ್ದು, ಹೊಸ ಆಯ್ಕೆಯಡಿ ಬಳಕೆದಾರರು ಏಳು ದಿನ, ಎಂಟು ನಿಮಿಷ ಮತ್ತು 16 ಸೆಕೆಂಡ್‌ವರೆಗಿನ ಅವಧಿಯಲ್ಲಿ ಮೆಸೇಜ್ ಡಿಲೀಟ್ ಮಾಡಬಹುದಾಗಿದೆ.

ವಾಟ್ಸ್‌ಆ್ಯಪ್ 'ಡಿಲೀಟ್ ಮೆಸೇಜ್ ಫಾರ್ ಆಲ್' ಆಯ್ಕೆ ಬೀಟಾ ಆವೃತ್ತಿಯಲ್ಲಿ ಪರಿಶೀಲನೆಯಲ್ಲಿದ್ದು, ಮುಂದೆ ಎಲ್ಲ ಬಳಕೆದಾರರಿಗೆ ದೊರೆಯುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.