ಬೆಂಗಳೂರು: ವಾಟ್ಸ್‌ಆ್ಯಪ್ ಮೂಲಕ ನೀವು ಕಳುಹಿಸಿದ ಮೆಸೇಜ್ ಅನ್ನು ನಿರ್ದಿಷ್ಟ ಸಮಯದೊಳಗೆ ಡಿಲೀಟ್ ಮಾಡುವ ಅವಕಾಶವಿದೆ.
ಅದರಲ್ಲೂ, ಗ್ರೂಪ್‌ಗಳಲ್ಲಿ ಕೆಲವೊಮ್ಮೆ ಡಿಲೀಟ್ ಮಾಡಬೇಕಿರುವ ಮೆಸೇಜ್ ಇಲ್ಲವೆ ಫೋಟೊ, ವಿಡಿಯೊವನ್ನು ‘ಡಿಲೀಟ್ ಫಾರ್ ಆಲ್‘ ಆಯ್ಕೆಯ ಬದಲು, ‘ಡಿಲೀಟ್ ಫಾರ್ ಮಿ‘ ಎಂದು ಕೊಟ್ಟು ಪೇಚಿಗೆ ಸಿಲುಕಿಕೊಳ್ಳುವುದಿದೆ. ಅಂತಹ ಸಂದರ್ಭದಲ್ಲಿ ಮೆಸೇಜ್ ನಿಮ್ಮ ವಾಟ್ಸ್‌ಆ್ಯಪ್‌ನಲ್ಲಿ ಮಾತ್ರವೇ ಡಿಲೀಟ್ ಆಗಿರುತ್ತದೆ. ಗ್ರೂಪ್‌ನಲ್ಲಿರುವ ಇಲ್ಲವೆ ವೈಯಕ್ತಿಕ ಚಾಟ್‌ಗಳಲ್ಲಿ ಡಿಲೀಟ್ ಆಗಿರುವುದಿಲ್ಲ. ಅದಕ್ಕಾಗಿ, ವಾಟ್ಸ್‌ಆ್ಯಪ್ ಹೊಸ ಫೀಚರ್ ಒಂದನ್ನು ಪರಿಚಯಿಸುತ್ತಿದೆ.
ಬಳಕೆದಾರರು, ಆಕಸ್ಮಿಕವಾಗಿ ಡಿಲೀಟ್ ಮಾಡಿರುವ ಮೆಸೇಜ್‌ಗಳನ್ನು ಮರಳಿ ಪಡೆಯಲು, ‘ಅನ್‌ಡೂ‘ ಆಯ್ಕೆಯನ್ನು ಒದಗಿಸಲು ವಾಟ್ಸ್‌ಆ್ಯಪ್ ಮುಂದಾಗಿದೆ.
ಹೊಸ ಫೀಚರ್ ಈಗ ಪರೀಕ್ಷಾರ್ಥ ಬಳಕೆಯಲ್ಲಿದ್ದು, ಮುಂದೆ ಎಲ್ಲ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆಯಿದೆ. ಬೀಟಾ ಆವೃತ್ತಿಯಲ್ಲಿ ಪರಿಶೀಲನೆ ಮುಗಿದ ಹೊಸ ಅಪ್‌ಡೇಟ್ ಮೂಲಕ ದೊರೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.