ನವದೆಹಲಿ: ವಿಡಿಯೊ ಹಂಚಿಕೊಳ್ಳುವ ಜನಪ್ರಿಯ ತಾಣ, ಗೂಗಲ್ ಒಡೆತನದ ಯೂಟ್ಯೂಬ್, ಭಾರತದಲ್ಲಿ ಮೂರನೇ ತ್ರೈಮಾಸಿಕದ ಅವಧಿಯಲ್ಲಿ ಒಟ್ಟು 17 ಲಕ್ಷ ವಿಡಿಯೊಗಳನ್ನು ಡಿಲೀಟ್ ಮಾಡಿದೆ.
ಕಂಪನಿಯ ವಿವಿಧ ನಿರ್ಬಂಧ ಮತ್ತು ನಿಯಮಗಳನ್ನು ಪಾಲಿಸದೇ ಇರುವ ವಿಡಿಯೊಗಳು ಮತ್ತು ಸರ್ಕಾರದ, ಸಚಿವಾಲಯದ ಕಮ್ಯುನಿಟಿ ನಿಯಮ ಉಲ್ಲಂಘಿಸಿದ ವಿಡಿಯೊಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಯೂಟ್ಯೂಬ್ ಹೇಳಿದೆ.
ಜಾಗತಿಕವಾಗಿ ಈ ಅವಧಿಯಲ್ಲಿ 56 ಲಕ್ಷ ವಿಡಿಯೊಗಳನ್ನು ಯೂಟ್ಯೂಬ್ ತನ್ನ ವೇದಿಕೆಯಿಂದ ತೆಗೆದು ಹಾಕಿದೆ. ಅದರಲ್ಲಿ ಭಾರತವೊಂದರಲ್ಲೇ 17 ಲಕ್ಷ ವಿಡಿಯೊ ಡಿಲೀಟ್ ಮಾಡಲಾಗಿದೆ.
ಯೂಟ್ಯೂಬ್‌ನ ಸ್ವಯಂಚಾಲಿತ ವಿಮರ್ಶೆಯ ಮೂಲಕ ಮೊದಲ ಹಂತದಲ್ಲಿ ವಿಡಿಯೊಗಳನ್ನು ಪರಿಶೀಲಿಸಿದಾಗ ಅವುಗಳ ವಿರುದ್ಧ ಕ್ರಮಕ್ಕೆ ಕಂಪನಿಗೆ ಸೂಚನೆ ಲಭಿಸಿತ್ತು. ನಂತರದಲ್ಲಿ ಯೂಟ್ಯೂಬ್ ಸಿಬ್ಬಂದಿ ವಿಡಿಯೊಗಳು ಕಂಪನಿಯ ನಿಯಮಗಳಿಗೆ ವಿರುದ್ಧವಾಗಿವೆಯೇ ಎಂದು ಪರಿಶೀಲಿಸಿ, ಕ್ರಮ ಕೈಗೊಂಡಿದ್ದಾರೆ.
ಕಾಪಿರೈಟ್, ಅಶ್ಲೀಲ ಮತ್ತು ಸರ್ಕಾರ ನಿಯಮಗಳಿಗೆ ವಿರುದ್ಧವಾದ ವಿಡಿಯೊಗಳು, ಕಂಪನಿಯ ಸೂಚನೆ ಪಾಲಿಸದ ವಿಡಿಯೊ ವಿರುದ್ಧ ಯೂಟ್ಯೂಬ್ ಕ್ರಮ ಕೈಗೊಂಡಿದ್ದು, ಪೋಸ್ಟ್ ಮಾಡಿದ ಕೂಡಲೇ ಸ್ವಯಂಚಾಲಿತವಾಗಿ ಪರಿಶೀಲನೆ ನಡೆಸಿ, ಡಿಲೀಟ್ ಮಾಡುವ ವ್ಯವಸ್ಥೆ ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.