ADVERTISEMENT

ಕಂಟೆಂಟ್‌ ಕ್ರಿಯೇಟರ್‌ಗಳ ವಿರುದ್ಧ ಅಶ್ಲೀಲ ಕಾಮೆಂಟ್: ಕ್ರಮಕ್ಕೆ ಮುಂದಾದ ಯೂಟ್ಯೂಬ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜುಲೈ 2022, 4:57 IST
Last Updated 3 ಜುಲೈ 2022, 4:57 IST
   

ಬೆಂಗಳೂರು: ಯೂಟ್ಯೂಬ್‌ನಲ್ಲಿ ವಿವಿಧ ಕ್ಷೇತ್ರಕ್ಕೆ ಸಂಬಂಧಿಸಿದ ಚಾನೆಲ್‌ಗಳನ್ನು ನಿರ್ವಹಿಸುವ ಕಂಟೆಂಟ್ ಕ್ರಿಯೇಟರ್‌ಗಳಿಗೆ ಕಾಮೆಂಟ್ ಮೂಲಕ ಕಿರುಕುಳ ನೀಡುವ ಮತ್ತು ಅಶ್ಲೀಲ ಪದ ಬಳಕೆ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಯೂಟ್ಯೂಬ್ ಮುಂದಾಗಿದೆ.

ಯೂಟ್ಯೂಬ್ ಚಾನೆಲ್‌ಗಳಲ್ಲಿ ವಿಡಿಯೊ ಪೋಸ್ಟ್ ಮಾಡಿದ ಬಳಿಕ ಅವುಗಳನ್ನು ಟ್ರೋಲ್ ಮಾಡುವುದು, ಕಾಮೆಂಟ್ ಮೂಲಕ ಹೀಯಾಳಿಸುವುದು ಹಾಗೂ ಕ್ರಿಯೇಟರ್‌ಗಳನ್ನು ವೈಯಕ್ತಿಕವಾಗಿ ನಿಂದಿಸುವ ಪ್ರಕರಣಗಳನ್ನು ಯೂಟ್ಯೂಬ್ ಗಂಭೀರವಾಗಿ ಪರಿಗಣಿಸಿದೆ.

ಯೂಟ್ಯೂಬ್‌ ತನ್ನ ವೇದಿಕೆಯಲ್ಲಿ ಹಲವು ಬದಲಾವಣೆಗಳನ್ನು ಮಾಡುವ ಮೂಲಕ ಕಂಟೆಂಟ್ ಕ್ರಿಯೇಟರ್‌ಗಳಿಗೆ ಬೆಂಬಲ ನೀಡಲಿದೆ.

ADVERTISEMENT

ಡಿಸ್‌ಲೈಕ್ ಸಂಖ್ಯೆಯನ್ನು ಹೈಡ್ ಮಾಡುವುದು ಮತ್ತು ಚಾನೆಲ್ ಚಂದಾದಾರರ ಸಂಖ್ಯೆಯನ್ನು ತೋರಿಸುವುದರ ಮೂಲಕ ಯೂಟ್ಯೂಬ್ ಖಾತೆಯ ಅಸಲಿತನ ಪತ್ತೆಹಚ್ಚಲು ನೆರವಾಗಲಿದೆ.

ಅಲ್ಲದೆ, ಸ್ಪಾಮ್ ಖಾತೆಗಳ ಮೂಲಕ ಬರುವ ಕಾಮೆಂಟ್‌ಗಳನ್ನು ಅಳಿಸಿ ಹಾಕುವುದು ಇಲ್ಲವೆ ಹೈಡ್ ಮಾಡುವ ಕ್ರಮಕ್ಕೆ ಮುಂದಾಗಲಿದೆ. ಜತೆಗೆ, ರಿಪೋರ್ಟ್ ಮಾಡುವ ಆಯ್ಕೆಯೂ ಇರಲಿದ್ದು, ಯೂಟ್ಯೂಬ್‌ನಲ್ಲಿ ಗುಣಮಟ್ಟದ ಕಂಟೆಂಟ್ ಹಾಗೂ ಸ್ಪಷ್ಟ ಮಾಹಿತಿ ಇರುವ ವಿಡಿಯೊಗಳನ್ನು ಉಳಿಸಿಕೊಳ್ಳಲು ನೆರವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.