ಲಾಸ್ ಏಂಜಲೀಸ್: ಯೂಟ್ಯೂಬ್‌ನ ಕಿರು ವಿಡಿಯೊ ಆವೃತ್ತಿ ‘ಶಾರ್ಟ್ಸ್‘ ರಚನೆಕಾರರಿಗೆ ಅದರಿಂದ ಬರುವ ಆದಾಯದಲ್ಲಿ ಶೇ 45ರಷ್ಟು ಪಾಲೂ ನೀಡಲು ಕಂಪನಿ ಮುಂದಾಗಿದೆ.
ಗೂಗಲ್ ಒಡೆತನದ ಯೂಟ್ಯೂಬ್, ಟಿಕ್‌ಟಾಕ್ ವಿಡಿಯೊ ಮತ್ತು ಇನ್‌ಸ್ಟಾಗ್ರಾಮ್‌ನ ರೀಲ್ಸ್‌ನಿಂದ ಸ್ಪರ್ಧೆ ಎದುರಿಸುತ್ತಿದೆ.
ಹೀಗಾಗಿ, ಹೆಚ್ಚಿನ ಸಂಖ್ಯೆಯ ವಿಡಿಯೊ ಕ್ರಿಯೇಟರ್ಸ್ ಮತ್ತು ಪ್ರತಿಸ್ಪರ್ಧಿ ಕಂಪನಿಗಳಿಂದ ಬಳಕೆದಾರರನ್ನು ಸೆಳೆಯಲು ಯೂಟ್ಯೂಬ್ ಮುಂದಾಗಿದೆ.
ಅದರ ಸಲುವಾಗಿ, 30 ರಿಂದ 60 ಸೆಕೆಂಡ್ಸ್ ಅವಧಿಯ ಶಾರ್ಟ್ಸ್ ವಿಡಿಯೊ ಪೋಸ್ಟ್ ಮಾಡುವವರಿಗೆ ಯೂಟ್ಯೂಬ್, ಜಾಹೀರಾತಿಯ ಆದಾಯದಲ್ಲಿ ಶೇ 45ರಷ್ಟು ಪಾಲು ನೀಡಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.