ADVERTISEMENT

ಸ್ಮಾರ್ಟ್‌ ಟಿವಿಗಳಲ್ಲೂ ಬರುತ್ತಿದೆ ಯೂಟ್ಯೂಬ್ ಶಾರ್ಟ್ಸ್

ಯೂಟ್ಯೂಬ್ ಕಿರು ವಿಡಿಯೊ ಶಾರ್ಟ್ಸ್ ಈಗ ಸ್ಮಾರ್ಟ್‌ ಟಿವಿಯಲ್ಲಿ ಲಭ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2022, 7:19 IST
Last Updated 10 ನವೆಂಬರ್ 2022, 7:19 IST
   

ಬೆಂಗಳೂರು: ದೇಶದಲ್ಲಿ ಟಿಕ್‌ಟಾಕ್‌ಗೆ ನಿರ್ಬಂಧ ವಿಧಿಸಿದ ಬಳಿಕ ಕಿರು ವಿಡಿಯೊ ಆ್ಯಪ್‌ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಗೂಗಲ್ ಒಡೆತನದ ಶಾರ್ಟ್ಸ್ ಹೆಚ್ಚಿನ ಬಳಕೆದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ನೂತನ ಅಪ್‌ಡೇಟ್‌ನಲ್ಲಿ ಯೂಟ್ಯೂಬ್ ಶಾರ್ಟ್ಸ್ ವಿಡಿಯೊಗಳು ಸ್ಮಾರ್ಟ್ ಟಿವಿಯಲ್ಲೂ ದೊರೆಯುತ್ತಿದೆ. ಅದರ ಮೂಲಕ ದೊಡ್ಡ ಪರದೆಯಲ್ಲಿ ಶಾರ್ಟ್ಸ್ ವಿಡಿಯೊ ವೀಕ್ಷಿಸಲು ಅನುಕೂಲವಾಗಲಿದೆ.

ಯೂಟ್ಯೂಬ್ ಶಾರ್ಟ್ಸ್ ಹೆಚ್ಚಿನ ಸಂಖ್ಯೆಯ ಕ್ರಿಯೇಟರ್‌ಗಳನ್ನು ಸೆಳೆಯುವ ಸಲುವಾಗಿ ಜಾಹೀರಾತು ಆದಾಯದಲ್ಲಿ ವಿಡಿಯೊ ರಚನೆಕಾರರಿಗೆ ಶೇ 45ರಷ್ಟು ಆದಾಯದ ಪಾಲು ನೀಡುತ್ತಿದೆ.

ADVERTISEMENT

ಹೊಸ ಅಪ್‌ಡೇಟ್‌ನಲ್ಲಿ ಸ್ಮಾರ್ಟ್‌ ಟಿವಿಯಲ್ಲೂ ಲಭ್ಯವಾಗುವ ಜತೆಗೆ, ಬಳಕೆದಾರರು ವಿಡಿಯೊ ಸರ್ಚ್ ಮಾಡಲು, ಲೈಕ್, ಕಾಮೆಂಟ್ ಮಾಡಲು ಹಾಗೂ ಚಂದಾದಾರರಾಗಲು ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.