ಬೆಂಗಳೂರು: ಜಿಯೊ ಫೈಬರ್ ನೀಡುತ್ತಿರುವ ಪೈಪೋಟಿ ಎದುರಿಸಲು ಏರ್‌ಟೆಲ್ ಬ್ರಾಡ್‌ಬ್ಯಾಂಡ್‌ನ ಹೊಸ ಯೋಜನೆಗಳನ್ನು ಹೊರ ತಂದಿದೆ. ₹3,999 ಮೌಲ್ಯದ ಎಕ್ಸ್‌ಟ್ರೀಮ್ ಬಾಕ್ಸ್ ಸಹಿತ ಐದು ಹೊಸ ಯೋಜನೆಗಳು ಗ್ರಾಹಕರಿಗೆ ಸಿಗಲಿವೆ ಎಂದು ಹಲವು ವೆಬ್‌ಸೈಟ್‌ಗಳು ವರದಿ ಮಾಡಿವೆ.
ಇದರೊಂದಿಗೆ ಡಿಸ್ನಿ+ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ವಿಡಿಯೊ ಹಾಗೂ ಜೀ5 ಒಟಿಟಿಗಳ ಚಂದಾದಾರಿಕೆ ಉಚಿತವಾಗಿ ಸಿಗಲಿದೆ. ಎಲ್ಲ ಐದೂ ಪ್ಲಾನ್‌ಗಳು ಅನಿಯಮಿತ ಕರೆಗಳು ಹಾಗೂ ಅನಿಯಮಿತ ಡೇಟಾ ಒಳಗೊಂಡಿರಲಿವೆ. 'ಏರ್‌ಟೆಲ್ ಎಕ್ಸ್‌ಟ್ರೀಮ್ ಬಂಡಲ್' ಪ್ಲಾನ್‌ಗಳ ಪೈಕಿ ಆರಂಭಿಕ ದರ ₹499 ನಿಗದಿಯಾಗಿದ್ದು, ಸೆಪ್ಟೆಂಬರ್ 7ರಿಂದ ಗ್ರಾಹಕರಿಗೆ ಕೊಡುಗೆ ಸಿಗಲಿದೆ ಎಂದು ವರದಿಯಾಗಿದೆ.
ಜಿಯೊ ಫೈಬರ್ ₹399ರಿಂದ ಬ್ರಾಡ್‌ಬ್ಯಾಂಡ್ ಪ್ಲಾನ್ ಆರಂಭಿಸಿದೆ. ಏರ್‌ಟೆಲ್‌ನಲ್ಲಿ ಆರಂಭಿಕ ಪ್ಲಾನ್ ₹499 ಇದ್ದು, 40ಎಂಬಿಪಿಎಸ್ ವೇಗದೊಂದಿಗೆ ಅನಿಯಮಿತ ಡೇಟಾ ಮತ್ತು ಕರೆಗಳ ಸೌಲಭ್ಯ ಸಿಗಲಿದೆ. ಇದರೊಂದಿಗೆ ಉಚಿತವಾಗಿ ಏರ್‌ಟೆಲ್ ಎಕ್ಸ್‌ಟ್ರೀಮ್ ಒಟಿಟಿ ಆ್ಯಪ್ ವೀಕ್ಷಿಸಬಹುದು.
₹799 ಪ್ಲಾನ್‌ನಲ್ಲಿ 100ಎಂಬಿಪಿಎಸ್ ಡೇಟಾ ಜೊತೆಗೆ ಅನಿಯಮಿತ ಡೇಟಾ ಮತ್ತು ಕರೆಗಳು, ಏರ್‌ಟೆಲ್ ಎಕ್ಸ್‌ಟ್ರೀಮ್ ಒಟಿಟಿ ಆ್ಯಪ್ ಇರಲಿದೆ. ₹999 ಪ್ಲಾನ್‌ನಲ್ಲಿ ಡೇಟಾ ವೇಗ 200ಎಂಬಿಪಿಎಸ್, ₹1,499 ಮತ್ತು ₹3,999 ಪ್ಲಾನ್‌ಗಳಲ್ಲಿ ಕ್ರಮವಾಗಿ 300ಎಂಬಿಪಿಎಸ್ ಮತ್ತು 1ಜಿಬಿಪಿಎಸ್ ವೇಗದ ಡೇಟಾ ಸಿಗಲಿದೆ. ಈ ಪ್ಲಾನ್‌ಗಳೊಂದಿಗೆ ಏರ್‌ಟೆಲ್ ಎಕ್ಸ್‌ಟ್ರೀಮ್ ಒಟಿಟಿ, ಡಿಸ್ನಿ+ಹಾಟ್‌ಸ್ಟಾರ್, ಅಮೆಜಾನ್ ಪ್ರೈಮ್ ವಿಡಿಯೊ ಹಾಗೂ ಜೀ5 ಒಟಿಟಿಗಳ ಚಂದಾದಾರಿಕೆ ಉಚಿತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.