ಬೆಂಗಳೂರು: ಬಳಕೆದಾರರಿಗೆ ಉತ್ತಮ ಗೇಮಿಂಗ್ ಅನುಭವ ಒದಗಿಸುವ ಉದ್ದೇಶದಿಂದ ಅಮೆಜಾನ್, ಭಾರತದಲ್ಲಿ ಪ್ರೈಮ್ ಗೇಮಿಂಗ್ ಪರಿಚಯಿಸಿದೆ.
ಅಮೆಜಾನ್ ಪ್ರೈಮ್ ಸದಸ್ಯರಿಗೆ ಪ್ರೈಮ್ ಗೇಮಿಂಗ್ ವಿಶೇಷತೆಗಳು ಲಭ್ಯವಾಗಲಿದೆ. ಜನಪ್ರಿಯ ವಿಡಿಯೊ ಗೇಮ್‌ಗಳಾದ ಕಾಲ್ ಆಫ್ ಡ್ಯೂಟಿ: ವಾರ್‌ಝೋನ್ 2.0, ಮಾಡರ್ನ್ ವಾರ್‌ಫೇರ್ 2 ಮತ್ತು ಇತರ ಹಲವು ವಿಡಿಯೊ ಗೇಮ್‌ಗಳು ಲಭ್ಯವಾಗಲಿದೆ.
ಅಮೆಜಾನ್ ಪ್ರೈಮ್ ಸದಸ್ಯರಿಗೆ ಮ್ಯೂಸಿಕ್, ಮೂವೀಸ್ ಮತ್ತು ಟಿವಿ ಸರಣಿಗಳು ಈಗಾಗಲೇ ದೊರೆಯುತ್ತಿವೆ. ಅದರ ಜತೆಗೆ ಹೊಸದಾಗಿ ಅಮೆಜಾನ್ ಗೇಮಿಂಗ್ ಲಭ್ಯವಾಗುತ್ತದೆ ಎಂದು ಕಂಪನಿ ಹೇಳಿದೆ.
ಅಮೆಜಾನ್ ಪ್ರೈಮ್ ಗೇಮಿಂಗ್ ಮೂಲಕ ಬಳಕೆದಾರರು ಆ್ಯಂಡ್ರಾಯ್ಡ್ ಫೋನ್, ವಿಂಡೋಸ್, ಮ್ಯಾಕ್ ಬಳಕೆದಾರರಿಗೆ ದೊರೆಯುತ್ತದೆ.
ಐಫೋನ್ ಬಳಕೆದಾರರಿಗೆ ಜನವರಿ 2023ರಲ್ಲಿ ಅಮೆಜಾನ್ ಪ್ರೈಮ್ ಗೇಮಿಂಗ್ ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.