ನಮ್ಮ ಹೆಚ್ಚಿನ ಮಾಹಿತಿಗಳು ನಮ್ಮ ಕೈಯಲ್ಲಿರುವ ಫೋನ್‌ನಲ್ಲಿಯೇ ಇರುತ್ತದೆ. ಒಂದು ವೇಳೆ ಫೋನ್ ಕಳೆದು ಹೋದರೆ ಅಥವಾ ಬದಲಾಯಿಸಿದರೆ ಹಳೇ ಫೋನ್‌ನಲ್ಲಿದ್ದ ಡೇಟಾಗಳನ್ನು ಹೊಸ ಫೋನ್‌ಗೆ ವರ್ಗಾವಣೆ ಮಾಡಬೇಕಾಗುತ್ತದೆ. ಹೀಗೆ ಸುಲಭವಾಗಿ ಮಾಡಬೇಕಾದರೆ ನಮ್ಮ ಫೋನ್‌ನಲ್ಲಿರುವ ವಿಡಿಯೊ, ಫೋಟೊ, ಸಂಪರ್ಕ ಸಂಖ್ಯೆ ಎಲ್ಲದರ ಬ್ಯಾಕ್ ಅಪ್ ಇರಿಸಿಕೊಳ್ಳುವುದು ಒಳ್ಳೆಯದು.
ಗೂಗಲ್ ಫೋನ್ ಬ್ಯಾಕ್ಅಪ್
ನಿಮ್ಮ ಗೂಗಲ್ ಖಾತೆಯಲ್ಲಿ ನಿಮ್ಮ ಮಾಹಿತಿಗಳನ್ನು ಸೇವ್ ಮಾಡಿಡುವುದು ಸುಲಭ.
ಅದಕ್ಕಾಗಿ ಹೀಗೆ ಮಾಡಿ
ಫೋನ್ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ
ಬ್ಯಾಕ್‌ಆಪ್ ಆ್ಯಂಡ್ ರೀಸೆಟ್ ಕ್ಲಿಕ್ ಮಾಡಿ
ಅಲ್ಲಿ ಗೂಗಲ್ ಅಕೌಂಟ್ ಕೆಳಗೆ ಬ್ಯಾಕ್‌ಅಪ್ ಮೈ ಡೇಟಾ ಎಂದಿರುತ್ತದೆ. ಅದನ್ನು ಆನ್ ಮಾಡಿ.
ಕೆಳಗೆ ಬ್ಯಾಕ್‌ಅಪ್ ಅಕೌಂಟ್‌ನಲ್ಲಿ ನಿಮ್ಮ ಜಿಮೇಲ್ ಖಾತೆ ಇರುತ್ತದೆ. ಒಂದು ವೇಳೆ ನೀವು ಈ ಖಾತೆಯನ್ನು ಬದಲಿಸಬೇಕು ಎಂದಿದ್ದರೆ ಅದಕ್ಕೂ ಇಲ್ಲಿ ಅವಕಾಶವಿದೆ.
ಇಲ್ಲಿನಿಮ್ಮ ಫೋನ್ ಬ್ಯಾಕ್ ಅಪ್ ಗೂಗಲ್ ಖಾತೆಯಲ್ಲಿ ಸೇವ್ ಆಗಿರುತ್ತದೆ.
ಗಮನಿಸಿ: ವೈಫೈ ಬಳಸಿ ಬ್ಯಾಕ್‌ಅಪ್ ಮಾಡುವುದು ಒಳ್ಳೆಯದು. ಬ್ಯಾಕ್‌ಅಪ್ ಹೆಚ್ಚಿನ ಮೊಬೈಲ್ ಡೇಟಾ ಬಳಸುತ್ತದೆ.
ಇದಲ್ಲದೆ ಸ್ಯಾಮ್‌ಸಂಗ್ ಫೋನ್‌ನಲ್ಲಿ ಬ್ಯಾಕ್‌ಅಪ್‌ಗಾಗಿ ಸ್ಯಾಮ್‌ಸಂಗ್ ಖಾತೆಯನ್ನೂ ಬಳಸಬಹುದು. ಇದಕ್ಕಾಗಿ ಗೂಗಲ್ ಖಾತೆ ಬಳಸಿ ಸ್ಯಾಮ್‌ಸಂಗ್ ಖಾತೆ ಕ್ರಿಯೇಟ್ ಮಾಡಬಹುದು. ನಿಮ್ಮೆಲ್ಲ ಡೇಟಾಗಳು ಗೂಗಲ್ ಖಾತೆಯ ಬದಲು ಸ್ಯಾಮ್‌ಸಂಗ್ ಖಾತೆಯಲ್ಲಿ ಸೇವ್ ಆಗಿರುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.