ADVERTISEMENT

WWDC 2022: ಹೊಸ ಮ್ಯಾಕ್‌ಬುಕ್, ಐಓಎಸ್ ಘೋಷಿಸಿದ ಆ್ಯಪಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜೂನ್ 2022, 2:30 IST
Last Updated 7 ಜೂನ್ 2022, 2:30 IST
ಆ್ಯಪಲ್ ಜಾಗತಿಕ ಡೆವಲಪರ್‌ಗಳ ಸಮಾವೇಶ
ಆ್ಯಪಲ್ ಜಾಗತಿಕ ಡೆವಲಪರ್‌ಗಳ ಸಮಾವೇಶ   

ಬೆಂಗಳೂರು: ಸೋಮವಾರ ನಡೆದ ಆ್ಯಪಲ್ ಜಾಗತಿಕ ಡೆವಲಪರ್‌ಗಳ ಸಮಾವೇಶದಲ್ಲಿ ನೂತನ ಐಓಎಸ್ 16, ಐಪ್ಯಾಡ್ ಓಎಸ್, ವಾಚ್ಓಎಸ್ ಮತ್ತು ಮ್ಯಾಕ್ಓಎಸ್ ಪರಿಚಯಿಸಲಾಗಿದ್ದು, ಸೆಪ್ಟೆಂಬರ್‌ನಲ್ಲಿ ಬಳಕೆದಾರರಿಗೆ ಲಭ್ಯವಾಗಲಿದೆ.

ಜತೆಗೆ, ಮ್ಯಾಕ್‌ಬುಕ್ ಸರಣಿಯಲ್ಲಿ ಆ್ಯಪಲ್ ಹೊಸದಾಗಿ ಮ್ಯಾಕ್‌ಬುಕ್ ಏರ್ ಮತ್ತು ಮ್ಯಾಕ್‌ಬುಕ್ ಪ‍್ರೊ ಪರಿಚಯಿಸಿದೆ.

ಆ್ಯಪಲ್ ಘೋಷಿಸಿರುವ ಹೊಸ ಐಓಎಸ್ 16, ಐಪ್ಯಾಡ್ ಓಎಸ್, ವಾಚ್ಓಎಸ್ ಮತ್ತು ಮ್ಯಾಕ್ಓಎಸ್ ಬೀಟಾ ಡೆವಲಪರ್‌ಗಳಿಗೆ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿದೆ ಎಂದು ಕಂಪನಿ ಹೇಳಿದೆ.

ADVERTISEMENT

ಹೊಸ ಓಎಸ್ ಸರಣಿಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಲು ಆ್ಯಪಲ್ ಮುಂದಾಗಿದ್ದು, ನೂತನ ಫೀಚರ್‌ಗಳ ಕುರಿತು ಆ್ಯಪಲ್ ಸಿಇಒ ಟಿಮ್ ಕುಕ್ ಮತ್ತು ಅವರ ತಂಡದವರು ಸಮಾವೇಶದಲ್ಲಿ ವಿವರಿಸಿದರು.

ಹೊಸ ಓಎಸ್ ಅಪ್‌ಡೇಟ್‌ಗಳು ಯಾವೆಲ್ಲ ಡಿವೈಸ್‌ಗಳಿಗೆ ಲಭ್ಯವಾಗಲಿವೆ ಮತ್ತು ಹೆಚ್ಚುವರಿ ಸೇರ್ಪಡೆಯಾಗಲಿರುವ ವೈಶಿಷ್ಟ್ಯಗಳ ಕುರಿತು ಆ್ಯಪಲ್ ಪಟ್ಟಿ ಬಿಡುಗಡೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.