ಬೆಂಗಳೂರು: ಟೆಕ್ ಮತ್ತು ಗ್ಯಾಜೆಟ್ ಲೋಕದ ಪ್ರಮುಖ ಕಂಪನಿ ಆ್ಯಪಲ್, ಸೋಮವಾರ ರಾತ್ರಿ ನಡೆದ ವರ್ಚುವಲ್ ಸಮ್ಮೇಳನದಲ್ಲಿ ನೂತನ ಸರಣಿಯ ಕಾರ್ಯಾಚರಣೆ ವ್ಯವಸ್ಥೆಯನ್ನು ಪರಿಚಯಿಸಿದೆ.
ಹೊಸ ಸರಣಿಯಲ್ಲಿ ಆ್ಯಪಲ್ 'ಐಓಎಸ್ 15', 'ಐಪ್ಯಾಡ್‌ಓಎಸ್ 15', 'ಮ್ಯಾಕ್ ಓಎಸ್ ಮಾಂಟೆರಿ' ಮತ್ತು 'ವಾಚ್ಓಎಸ್ 8' ಅನ್ನು ಘೋಷಿಸಲಾಗಿದೆ.
ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆ ಮತ್ತು ಭದ್ರತೆ, ಜಾಹಿರಾತು ಹಾಗೂ ಟ್ರ್ಯಾಕಿಂಗ್ ಬಗ್ಗೆ ನಿಗಾ ವಹಿಸಲು ಹಾಗೂ ಮಾಹಿತಿ ಕದಿಯುವ ಆ್ಯಪ್‌ಗಳನ್ನು ನಿಯಂತ್ರಿಸಲು ಹೊಸ ಓಎಸ್ ಸರಣಿಯಲ್ಲಿ ಮತ್ತಷ್ಟು ಹೆಚ್ಚಿನ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ ಎಂದು ಆ್ಯಪಲ್ ಹೇಳಿದೆ.
ಐಫೋನ್ 6ಎಸ್ ಮತ್ತು ನಂತರದ ಎಲ್ಲ ಮಾದರಿಗಳಿಗೆ ಐಓಎಸ್ 15, ಆ್ಯಪಲ್ ವಾಚ್ ಸಿರೀಸ್ 3 ಮತ್ತು ನಂತರದ ಎಲ್ಲ ಆವೃತ್ತಿಗಳಿಗೆ ವಾಚ್ ಓಎಸ್ 8 ಅಪ್‌ಡೇಟ್ ಲಭ್ಯವಾಗಲಿದೆ.
ಆ್ಯಪಲ್ ಡಿವೈಸ್‌ಗಳಲ್ಲಿ ಬಳಸಲಾಗುವ ಫೇಸ್‌ಟೈಮ್, ಐಕ್ಲೌಡ್, ಮೆಸೇಜಸ್, ಮ್ಯಾಪ್ಸ್, ಸಫಾರಿ ಬ್ರೌಸರ್‌ಗಳಲ್ಲಿ ಕೂಡ ಹಲವು ವಿಶೇಷತೆಗಳನ್ನು ಹೊಸ ಓಎಸ್ ಸರಣಿಯಲ್ಲಿ ಪರಿಚಯಿಸಲಾಗುತ್ತಿದೆ.
ನೂತನ ಓಎಸ್ ಅಪ್‌ಡೇಟ್ ಕುರಿತು ಆ್ಯಪಲ್ ಸಿಇಒ ಟಿಮ್ ಕುಕ್ ಘೋಷಿಸಿದ್ದು, ಮುಂದಿನ ಸೆಪ್ಟೆಂಬರ್‌ನಲ್ಲಿ ಬಳಕೆದಾರರಿಗೆ ಲಭ್ಯವಾಗುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.