ADVERTISEMENT

5G: ಆ್ಯಪಲ್ ಐಫೋನ್‌ನಲ್ಲಿ ಬೀಟಾ ಅಪ್‌ಡೇಟ್– ಬಳಕೆದಾರರಿಗೆ ಲಭ್ಯ

ಆ್ಯಪಲ್ ಐಫೋನ್‌ಗಳಲ್ಲಿ 5G ಅಪ್‌ಡೇಟ್

ಪಿಟಿಐ
Published 14 ನವೆಂಬರ್ 2022, 9:42 IST
Last Updated 14 ನವೆಂಬರ್ 2022, 9:42 IST
   

ನವದೆಹಲಿ: ಆ್ಯಪಲ್ ಐಫೋನ್‌ಗಳಲ್ಲಿ ಹೊಸದಾಗಿ 5G ಅಪ್‌ಡೇಟ್ ಪರಿಚಯಿಸುತ್ತಿದೆ. 5G ಬೆಂಬಲ ಇರುವ ಐಫೋನ್‌ಗಳಿಗೆ ಈಗಾಗಲೇ ಆ್ಯಪಲ್ ಬೀಟಾ ಸಾಫ್ಟ್‌ವೇರ್ ಬಿಡುಗಡೆ ಮಾಡಿದೆ.

ಆ್ಯಪಲ್ ಐಓಎಸ್ 16.2 ಬೀಟಾ ಆವೃತ್ತಿ ಲಭ್ಯವಿದ್ದು, ಅದರಲ್ಲಿ ನೂತನ 5G ಆಯ್ಕೆಯನ್ನು ಆ್ಯಪಲ್ ಒದಗಿಸಿದೆ. ಬಳಕೆದಾರರು ಬೀಟಾ ಆವೃತ್ತಿ ಉಪಯೋಗಿಸಲು ಇಚ್ಚಿಸಿದಲ್ಲಿ ಬೀಟಾ ಪ್ರೋಗ್ರಾಮ್‌ಗೆ ನೋಂದಾಯಿಸಿಕೊಂಡು ಬಳಸಬಹುದು.

ಐಫೋನ್ 12, ಎಸ್‌ಇ 3rd ಜನರೇಷನ್ಮತ್ತು ಐಫೋನ್ 13 ಹಾಗೂ 14 ಸರಣಿಗೆ ನೂತನ ಅಪ್‌ಡೇಟ್ ಲಭ್ಯವಾಗಲಿದೆ.

ADVERTISEMENT

ಏರ್‌ಟೆಲ್ ಮತ್ತು ಜಿಯೋ ಬಳಕೆದಾರರು 5G ವಿಶೇಷತೆಗಳನ್ನು ಬಳಸಬಹುದು.

ಬೀಟಾ ಸಾಫ್ಟ್‌ವೇರ್ ಪರಿಶೀಲನೆ ಮುಗಿದ ಬಳಿಕ ಡಿಸೆಂಬರ್‌ನಲ್ಲಿ ಎಲ್ಲ ಬಳಕೆದಾರರಿಗೆ ನೂತನ 5G ಅಪ್‌ಡೇಟ್ ದೊರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.