ಬೆಂಗಳೂರು: ಅ್ಯಪಲ್ ನೂತನ ಓಎಸ್ ಅಪ್‌ಡೇಟ್ ಐಓಎಸ್ 15, ಸೋಮವಾರದಿಂದ ಬಳಕೆದಾರರಿಗೆ ಲಭ್ಯವಾಗಲಿದೆ.
ಸೆ. 20ರಂದು ಹೊಸ ಐಓಎಸ್, ಅರ್ಹ ಐಫೋನ್‌ಗಳಿಗೆ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯವಿರುತ್ತದೆ ಎಂದು ಆ್ಯಪಲ್ ಘೋಷಿಸಿತ್ತು. ಅದರಂತೆ ರಾತ್ರಿ 10:30ರ ಬಳಿಕ ನೂತನ ಓಎಸ್ ದೊರೆಯಲಿದೆ.
ನೂತನ ಐಓಎಸ್ 15, ಹೆಚ್ಚಿನ ಭದ್ರತಾ ವೈಶಿಷ್ಟ್ಯಗಳು ಮತ್ತು ಹಲವು ಆಕರ್ಷಕ ಫೀಚರ್‌ಗಳನ್ನು ಹೊಂದಿರುತ್ತದೆ ಎಂದು ಆ್ಯಪಲ್ ಹೇಳಿದೆ.
ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಮಾಡಿಕೊಳ್ಳುವುದು ಹೇಗೆ?
ಐಫೋನ್ ಬಳಕೆದಾರರು ಸೆಟ್ಟಿಂಗ್ಸ್ ಹೋಗಿ, ಅದರಲ್ಲಿ ಜನರಲ್, ನಂತರ ಸಾಫ್ಟ್‌ವೇರ್ ಅಪ್‌ಡೇಟ್ ಎಂದಿರುವುದನ್ನು ಆಯ್ಕೆ ಮಾಡಬೇಕು. ವೈ-ಫೈ ಮೂಲಕ ಡೌನ್‌ಲೋಡ್ ಮಾಡಿಕೊಳ್ಳುವುದು ಸೂಕ್ತವಾಗಿದ್ದು, ಸಾಧ್ಯವಾಗದಿದ್ದರೆ, ಐಟ್ಯೂನ್ಸ್ ಮೂಲಕವೂ ಹೊಸ ಐಓಎಸ್ 15 ಇನ್‌ಸ್ಟಾಲ್ ಮಾಡಬಹುದು ಎಂದು ಆ್ಯಪಲ್ ಹೇಳಿದೆ.
ಆ್ಯಪಲ್ ಬಿಡುಗಡೆ ಮಾಡಿರುವ ಐಓಎಸ್ 15 ಓಎಸ್ ಅಪ್‌ಡೇಟ್ ಲಭ್ಯವಿರುವ ಐಫೋನ್‌ಗಳ ಪಟ್ಟಿ
iPhone 13
iPhone 13 mini
iPhone 13 Pro
iPhone 13 Pro Max
iPhone 12
iPhone 12 mini
iPhone 12 Pro
iPhone 12 Pro Max
iPhone 11
iPhone 11 Pro
iPhone 11 Pro Max
iPhone Xs
iPhone Xs Max
iPhone Xr
iPhone X
iPhone 8
iPhone 8 Plus
iPhone 7
iPhone 7 Plus
iPhone 6s
iPhone 6s Plus
iPhone SE (1st generation)
iPhone SE (2nd generation)
iPod touch (7th generation)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.