ADVERTISEMENT

iOS 16: ಹೊಸ ಓಎಸ್ ಪರಿಚಯಿಸಿದ ಆ್ಯಪಲ್; ಯಾವೆಲ್ಲ ಐಫೋನ್‌ಗೆ ಲಭ್ಯ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜೂನ್ 2022, 8:35 IST
Last Updated 7 ಜೂನ್ 2022, 8:35 IST
ನೂತನ ಐಓಎಸ್ 16
ನೂತನ ಐಓಎಸ್ 16    

ಬೆಂಗಳೂರು: ಸೋಮವಾರ ನಡೆದ ಜಾಗತಿಕ ಡೆವಲಪರ್‌ಗಳ ಸಮ್ಮೇಳನದಲ್ಲಿ ಆ್ಯಪಲ್ ಹೊಸ ಐಓಎಸ್ ಸರಣಿಯನ್ನು ಪರಿಚಯಿಸಿದೆ.

ಐಫೋನ್‌, ಮ್ಯಾಕ್, ವಾಚ್ ಮತ್ತು ಐಪ್ಯಾಡ್‌ಗಳಿಗೆ ನೂತನ ಓಎಸ್‌ ಅನ್ನು ಆ್ಯಪಲ್ ಘೋಷಿಸಿದ್ದು, ಮುಂದಿನ ದಿನಗಳಲ್ಲಿ ಹೊಸ ಅಪ್‌ಡೇಟ್ ಮೂಲಕ ದೊರೆಯಲಿದೆ.

ಐಫೋನ್‌ಗೆ ಆ್ಯಪಲ್ ಆಕರ್ಷಕ ವೈಶಿಷ್ಟ್ಯಗಳಿರುವ iOS 16 ಪರಿಚಯಿಸಿದೆ.

ADVERTISEMENT

ನೂತನ ಐಓಎಸ್ 16 ವಿಶೇಷತೆಗಳೇನು?

ಲಾಕ್‌ ಸ್ಕ್ರೀನ್ ಅನ್ನು ವೈಯಕ್ತೀಕರಿಸುವ ಆಯ್ಕೆಯನ್ನು ಆ್ಯಪಲ್ ಮೊದಲ ಬಾರಿಗೆ ಬಳಕೆದಾರರಿಗೆ ನೀಡುತ್ತಿದೆ. ನಿಮ್ಮಿಷ್ಟದ ಫೋಟೊ, ವಿಜೆಟ್, ಶಾರ್ಟ್‌ಕಟ್‌ಗಳನ್ನು ಲಾಕ್‌ಸ್ಕ್ರೀನ್‌ನಲ್ಲಿ ಸೇರಿಸಬಹುದು.

ನೋಟಿಫಿಕೇಶನ್‌ನಲ್ಲಿ ಕೂಡ ಹೊಸ ಆಯ್ಕೆಗಳನ್ನು ಬಳಕೆದಾರರಿಗೆ iOS 16 ನೀಡಲಿದ್ದು, ಸರಳವಾಗಿ ಫೋಕಸ್ ಮೋಡ್ ಆಯ್ಕೆ ಮಾಡಬಹುದಾಗಿದೆ.

ಕುಟುಂಬ ಮತ್ತು ಗೆಳೆಯರ ಜತೆ ಫೋಟೊಸ್ ಶೇರಿಂಗ್ ಮಾಡಲು ಹೊಸ ಆಯ್ಕೆ, ಮೆಸೇಜ್ ಅನ್‌ಸೆಂಡ್ ಫೀಚರ್, ಇ ಮೇಲ್‌ನಲ್ಲಿ ಮತ್ತಷ್ಟು ಆಯ್ಕೆಯನ್ನು ಆ್ಯಪಲ್ ನೀಡಲಿದೆ.

ಸಫಾರಿ ಬ್ರೌಸರ್, ಲೈವ್ ಟೆಕ್ಸ್ಟ್, ಡಿಕ್ಟೇಷನ್, ಮ್ಯಾಪ್‌, ಆ್ಯಪಲ್ ಪೇ ಮತ್ತು ವ್ಯಾಲೆಟ್ ಹೊಸ ಅಪ್‌ಡೇಟ್ ದೊರೆಯುತ್ತದೆ.

ಹೆಲ್ತ್ ಮತ್ತು ಫಿಟ್ನೆಸ್ ಆ್ಯಪ್‌ನಲ್ಲಿ ಹಲವು ಹೊಸತನವನ್ನು ಆ್ಯಪಲ್ ಪರಿಚಯಿಸುತ್ತಿದೆ. ಫ್ಯಾಮಿಲಿ ಶೇರಿಂಗ್, ಸೇಫ್ಟಿ ಫೀಚರ್ಸ್, ಕಾರ್‌ಪ್ಲೇ ಸಹಿತ ಹಲವು ಅಗತ್ಯ ವಿಶೇಷತೆಗಳನ್ನು ಆ್ಯಪಲ್ iOS 16 ಬಳಕೆದಾರರಿಗೆ ಒದಗಿಸಲಿದೆ.

ಪ್ರಸ್ತುತ ಡೆವಲಪರ್‌ಗಳಿಗೆ iOS 16 ಬೀಟಾ ಆವೃತ್ತಿ ಡೌನ್‌ಲೋಡ್‌ಗೆ ಲಭ್ಯವಿದ್ದು, ಸೆಪ್ಟೆಂಬರ್‌ನಲ್ಲಿ ನೂತನ iOS 16 ಬಳಕೆದಾರರಿಗೆ ದೊರೆಯುವ ನಿರೀಕ್ಷೆಯಿದೆ.

ಆ್ಯಪಲ್ ನೂತನ iOS 16 ಲಭ್ಯವಾಗಲಿರುವ ಐಫೋನ್‌ಗಳ ಪಟ್ಟಿ
iPhone 13
iPhone 13 mini
iPhone 13 Pro
iPhone 13 Pro Max iPhone 12
iPhone 12 mini
iPhone 12 Pro
iPhone 12 Pro Max iPhone 11
iPhone 11 Pro
iPhone 11 Pro Max iPhone XS
iPhone XS Max
iPhone XR
iPhone X
iPhone 8
iPhone 8 Plus
iPhone SE (2nd ಜನರೇಶನ್ ಮತ್ತು ನಂತರದ ಆವೃತ್ತಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.