ನವದೆಹಲಿ: ಭಾರತದಲ್ಲಿ ‘ಐಫೋನ್ 13’ ಸರಣಿಯ ಸ್ಮಾರ್ಟ್‌ಫೋನ್‌ಗಳ ತಯಾರಿಕೆ ಆರಂಭಿಸಲಾಗಿದೆ ಎಂದು ಆ್ಯಪಲ್ ಕಂಪನಿ ಸೋಮವಾರ ತಿಳಿಸಿದೆ.
ಕಂಪನಿಯು 2017ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಐಫೋನ್‌ಗಳ ತಯಾರಿಕೆ ಆರಂಭಿಸಿತ್ತು.
‘ಉತ್ತಮ ವಿನ್ಯಾಸ, ವಿಡಿಯೊ ಮತ್ತು ಫೋಟೊಗಳಿಗಾಗಿ ಅತ್ಯಾಧುನಿಕ ಕ್ಯಾಮರಾ ವ್ಯವಸ್ಥೆ, ಅತ್ಯುತ್ತಮ ಕಾರ್ಯನಿರ್ವಹಣೆಯ ‘ಎ15 ಬಯೋನಿಕ್ ಚಿಪ್’ ಹೊಂದಿರುವ ಐಫೋನ್ 13 ಅನ್ನು ಭಾರತದಲ್ಲಿ ತಯಾರಿಸಲು ಸಂತಸಗೊಂಡಿದ್ದೇವೆ. ಈ ಫೋನ್ ಈಗ ಸ್ಥಳೀಯರಿಗಾಗಿ ಇಲ್ಲಿಯೇ ಸಿದ್ಧವಾಗುತ್ತಿದೆ’ ಎಂದು ‘ಐಎಎನ್‌ಎಸ್’ ಸುದ್ದಿಸಂಸ್ಥೆ ಜತೆ ಹಂಚಿಕೊಂಡಿರುವ ಪ್ರಕಟಣೆಯಲ್ಲಿ ಆ್ಯಪಲ್ ತಿಳಿಸಿದೆ.
ಆ್ಯಪಲ್ ಕಂಪನಿಯು ಐಫೋನ್ 11, ಐಫೋನ್ 12 ಸ್ಮಾರ್ಟ್‌ಫೋನ್‌ಗಳನ್ನು ಈಗಾಗಲೇ ದೇಶದಲ್ಲಿ ತಯಾರಿಸುತ್ತಿದೆ. ಇದೀಗ ಐಫೋನ್ 13 ಆ ಸಾಲಿಗೆ ಸೇರಿದೆ.
ಐಫೋನ್ 13 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಕಂಪನಿಯು ಕಳೆದ ವರ್ಷ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಈ ಸರಣಿಯಲ್ಲಿ ಐಫೋನ್ 13 ಮಿನಿ, ಐಫೋನ್ 13, ಐಫೋನ್ 13 ಪ್ರೊ ಮತ್ತು ಐಫೋನ್ 13 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಮಾದರಿಗಳು ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ಗಳ ಬೆಲೆ ದೇಶದಲ್ಲಿ ₹69,900ರಿಂದ ಆರಂಭವಾಗಿ ₹1,79,900 ವರೆಗೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.