ADVERTISEMENT

ಆ್ಯಪ್ ಸ್ಪರ್ಧೆಯ ಅಂತಿಮ ಸುತ್ತಿಗೆ ‘ಕೂ’

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 20:00 IST
Last Updated 8 ಆಗಸ್ಟ್ 2020, 20:00 IST

ಬೆಂಗಳೂರು: ಆತ್ಮನಿರ್ಭರ ಕಿರು ತಂತ್ರಾಂಶ (ಆ್ಯಪ್) ಸ್ಪರ್ಧೆಯ ಅಂತಿಮ ಸ್ಪರ್ಧೆಯಲ್ಲಿ ಕನ್ನಡ ಭಾಷೆಯಲ್ಲಿನ ಮೈಕ್ರೊ ಬ್ಲಾಗಿಂಗ್‌ ಕೂ (Koo) ಆ್ಯಪ್ ಆಯ್ಕೆಯಾಗಿದೆ. ಬೆಂಗಳೂರಿನ ಅಪ್ರಮೇಯ ರಾಧಾಕೃಷ್ಣ ಅವರು ಇದರ ರೂವಾರಿ. ಸ್ಟಾರ್ಟ್‌ಅಪ್, ಉದ್ಯಮಿಗಳಲ್ಲಿ ಡಿಜಿಟಲ್ ಬಳಕೆ ಹೆಚ್ಚಿಸಲು 8 ಡಿಜಿಟಲ್ ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಕೂ ಆ್ಯಪ್ ಸಾಮಾಜಿಕ ಅಪ್ಲಿಕೇಷನ್ ವಿಭಾಗದಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.