ADVERTISEMENT

ಬೆದರಿಸಿ ಸುಲಿಗೆ ಮಾಡುವ ಇಮೇಲ್

​ಪ್ರಜಾವಾಣಿ ವಾರ್ತೆ
Published 4 ಮೇ 2020, 19:30 IST
Last Updated 4 ಮೇ 2020, 19:30 IST
ಸೈಬರ್‌ ಸುಲಿಗೆ –ಸಾಂಕೇತಿಕ ಚಿತ್ರ
ಸೈಬರ್‌ ಸುಲಿಗೆ –ಸಾಂಕೇತಿಕ ಚಿತ್ರ   

‘ನಿಮ್ಮ ಖಾಸಗಿ ಕ್ಷಣಗಳ ವಿಡಿಯೊವನ್ನು ಅಂತರ್ಜಾಲದಲ್ಲಿ ಹಂಚುತ್ತೇವೆ’ ಎಂಬುದಾಗಿ ಬೆದರಿಸಿ ಹಣ ಸುಲಿಗೆ ಮಾಡುವ ‘ನಕಲಿ’ ಇಮೇಲ್ ಅಭಿಯಾನ ದೇಶದಲ್ಲಿ ನಡೆಯುತ್ತಿದೆ. ಇಂಥ ಇ–ಮೇಲ್‌ಗಳು ಬಂದರೆ, ಆತಂಕಪಡುವ ಅಗತ್ಯವೇನೂ ಇಲ್ಲ ಎಂದು ಭಾರತೀಯ ಕಂಪ್ಯೂಟರ್‌ ತುರ್ತು ಸ್ಪಂದನಾ ದಳ (ಸಿಇಆರ್‌ಟಿ–ಇನ್‌) ಸ್ಪಷ್ಟಪಡಿಸಿದೆ. ಇಂಟರ್‌ನೆಟ್‌ ಬಳಕೆದಾರರು ಸಾಮಾಜಿಕ ಜಾಲತಾಣದ ತಮ್ಮ ಖಾತೆಗಳ ಪಾಸ್‌ವರ್ಡ್‌ಗಳನ್ನು ಹೊಸದಾಗಿ ಹೊಂದಿಸಿಕೊಳ್ಳುವಂತೆಯೂ ಅದು ಸಲಹೆ ನೀಡಿದೆ.

‘ನಿಮ್ಮ ಕಂಪ್ಯೂಟರ್‌ ಹ್ಯಾಕ್‌ ಆಗಿದೆ, ನಿಮ್ಮ ವೆಬ್‌ ಕ್ಯಾಮೆರಾ ಮೂಲಕ ವಿಡಿಯೊಗಳನ್ನು ಮಾಡಿಕೊಂಡಿದ್ದೇವೆ. ನಿಮ್ಮ ಪಾಸ್‌ವರ್ಡ್‌ಗಳು ನಮಗೆ ಗೊತ್ತಿವೆ’ ಎಂದು ವಂಚಕರು ಮೊದಲಿಗೆ ಇ–ಮೇಲ್‌ ಮಾಡುತ್ತಾರೆ. ಅದನ್ನು ನಂಬಿದರೆವಂಚಕರು ಸುಲಿಗೆ ಮಾಡುತ್ತಾರೆ ಎಂದು ಸಿಇಆರ್‌ಟಿ–ಇನ್‌ ಸಲಹೆ ಸೂಚನೆಗಳನ್ನು ಬಿಡುಗಡೆ ಮಾಡಿದೆ.

ಮೊದಲನೆಯದಾಗಿ ವಂಚಕರು ಇಂಟರ್ನೆಟ್‌ ಬಳಕೆದಾರರಿಗೆ ಇ–ಮೇಲ್‌ ಮಾಡುತ್ತಾರೆ. ಅದನ್ನು ನಂಬಿ ಪ್ರತಿಕ್ರಿಯಿಸಿದರೆ ಯಾವುದಾದರೊಂದು ಹಳೆಯ ಪಾಸ್‌ವರ್ಡ್ ಅನ್ನು ಇ– ಮೇಲ್‌ನಲ್ಲಿ ಬರೆದು ಕಳಿಸುತ್ತಾರೆ. ಈ ಮೂಲಕ ಬಳಕೆದಾರರ ಗಮನ ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ.ನಿಮ್ಮ ಎಲ್ಲ ಸಂಪರ್ಕಗಳಿಗೆ ನಿಮ್ಮ ಅಶ್ಲೀಲ ವಿಡಿಯೊ ಕಳುಹಿಸುತ್ತೇವೆ, ಇದನ್ನು ತಡೆಯಬೇಕಿದ್ದರೆ ಇಂತಿಷ್ಟು ಬಿಟ್-ಕಾಯಿನ್‌ಗಳನ್ನು ನೀಡಬೇಕಾಗುತ್ತದೆ. 24 ಗಂಟೆಗಳಲ್ಲಿ ಕೊಡದೇ ಹೋದರೆ ವಿಡಿಯೊವನ್ನು ಸ್ನೇಹಿತರು, ಸಂಬಂಧಿಗಳಿಗೆ ಕಳುಹಿಸುವುದಾಗಿ ಬೆದರಿಸುತ್ತಾರೆ. ಆದರೆ, ಇಂಥ ಇ– ಮೇಲ್‌ಗಳಿಗೆ ಉತ್ತರಿಸದಂತೆಯೂ, ಹಣ ನೀಡದಂತೆಯೂ ಸಿಇಆರ್‌ಟಿ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.