ADVERTISEMENT

ಚೀನಾ: ಆ್ಯಪ್‌ಗಳಲ್ಲಿ ಸಮಸ್ಯೆ ಸರಿಪಡಿಸಲು 6 ತಿಂಗಳ ಅಭಿಯಾನ

ಏಜೆನ್ಸೀಸ್
Published 26 ಜುಲೈ 2021, 10:55 IST
Last Updated 26 ಜುಲೈ 2021, 10:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೀಜಿಂಗ್‌: ಗ್ರಾಹಕ ಹಕ್ಕುಗಳ ಉಲ್ಲಂಘನೆ, ಸೈಬರ್‌ ಭದ್ರತೆಗೆ ಧಕ್ಕೆ, ಮಾರುಕಟ್ಟೆಯನ್ನು ಏರುಪೇರು ಮಾಡುವ ಉದ್ದೇಶದ ಆ್ಯಪ್‌ಗಳ ತೆರವಿಗಾಗಿ 6 ತಿಂಗಳ ಸ್ವಚ್ಛತಾ ಅಭಿಯಾನವನ್ನು ಚೀನಾ ಆರಂಭಿಸಿದೆ.

ಚೀನಾದ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ಈ ಕುರಿತು ಆನ್‌ಲೈನ್‌ ನೋಟಿಸ್‌ ನೀಡಿದ್ದಾರೆ. ಗ್ರಾಹಕರಿಗೆ ತಪ್ಪುಮಾಹಿತಿ ಒದಗಿಸುವ ಪಾಪ್‌ ಅಪ್‌ ಸಮಸ್ಯೆಗಳನ್ನುಆ್ಯಪ್‌ಗಳಲ್ಲಿ ಸರಿಪಡಿಸಬೇಕು ಎಂದಿದ್ದಾರೆ.

ಉದ್ಯಮ ಸಂಸ್ಥೆಗಳು ಮತ್ತು ಪೊಲೀಸರು ವ್ಯಕ್ತಿಗತ ಮಾಹಿತಿಗಳನ್ನು ಬಳಸುವುದನ್ನು ತಡೆಯುವುದು ಈ ಅಭಿಯಾನದ ಪ್ರಮುಖ ಉದ್ದೇಶ. ಈಗಾಗಲೇ ಚೀನಾದ ಕೆಲ ಬೃಹತ್ ಕಂಪನಿಗಳಿಗೆ ದಂಡವನ್ನೂ ವಿಧಿಸಲಾಗಿದೆ.ಸಮಸ್ಯೆಗಳಿವೆ ಎಂದು ಗುರುತಿಸಲಾದ 15 ಆ್ಯಪ್‌ಗಳ ಪಟ್ಟಿಯನ್ನೂ ಚೀನಾ ಭಾನುವಾರ ಬಿಡುಗಡೆ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.