ADVERTISEMENT

ಎಲೆಕ್ಟ್ರಿಕ್ ವಾಹನ ತಯಾರಿಕೆಗೆ ಮುಂದಾದ ಚೀನಾದ ಶಿಯೋಮಿ

ರಾಯಿಟರ್ಸ್
Published 26 ಮಾರ್ಚ್ 2021, 7:03 IST
Last Updated 26 ಮಾರ್ಚ್ 2021, 7:03 IST
ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕ ಸಂಸ್ಥೆ ಶಿಯೋಮಿ
ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕ ಸಂಸ್ಥೆ ಶಿಯೋಮಿ   

ಚೀನಾದ ಶಿಯೋಮಿ ಕಾರ್ಪ್, ‘ಗ್ರೇಟ್ ವಾಲ್ ಮೋಟಾರ್ ಕಂ. ಲಿ.’ ಫ್ಯಾಕ್ಟರಿ ಸಹಯೋಗದಲ್ಲಿ ಎಲೆಕ್ಟ್ರಿಕ್ ವಾಹನ ತಯಾರಿಸಲು ಮುಂದಾಗಿದೆ. ಸ್ಮಾರ್ಟ್ ಮೊಬಿಲಿಟಿ ಕ್ಷೇತ್ರಕ್ಕೆ ಪ್ರವೇಶಿಸಲು ಶಿಯೋಮಿ ಉತ್ಸುಕವಾಗಿದೆ ಎಂದು ಈ ಒಪ್ಪಂದದ ಬಗ್ಗೆ ಬಲ್ಲವರು ತಿಳಿಸಿದ್ದಾರೆ.

ಜಗತ್ತಿನ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕ ಸಂಸ್ಥೆಯಾದ ಶಿಯೋಮಿ, ಚೀನಾದ ಗ್ರೇಟ್ ವಾಲ್ ಜತೆಗೆ ಮಾತುಕತೆ ನಡೆಸುತ್ತಿದೆ.

ಗ್ರೇಟ್ ವಾಲ್ ಫ್ಯಾಕ್ಟರಿ ಬಳಸಿಕೊಂಡು, ಅದರ ಮೂಲಕ ತನ್ನದೇ ಸ್ವಂತ ಬ್ರ್ಯಾಂಡ್ ಅಡಿಯಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಉತ್ಪಾದಿಸುವ ಗುರಿಯನ್ನು ಶಿಯೋಮಿ ಹೊಂದಿದೆ.

ADVERTISEMENT

ಈಗಾಗಲೇ ಮಾರುಕಟ್ಟೆಯಲ್ಲಿರುವ ವಿವಿಧ ಎಲೆಕ್ಟ್ರಾನಿಕ್ ಉತ್ಪನ್ನಗಳ ಜತೆಗೇ, ಶಿಯೋಮಿ ಜಾಗತಿಕ ಮಾರುಕಟ್ಟೆಗೆ ವಿದ್ಯುತ್ ಚಾಲಿತ ವಾಹನಗಳನ್ನು ಪರಿಚಯಿಸುವ ಉದ್ದೇಶ ಹೊಂದಿದೆ.

ಶಿಯೋಮಿ ಯೋಜನೆಗೆ ಗ್ರೇಟ್ ವಾಲ್ ಎಂಜಿನಿಯರ್, ತಾಂತ್ರಿಕ ಸಹಕಾರ ನೀಡಲಿದೆ. ಆದರೆ ಈ ಬಗ್ಗೆ ಶಿಯೋಮಿ ಮತ್ತು ಗ್ರೇಟ್ ವಾಲ್ ಪ್ರತಿಕ್ರಿಯೆ ನೀಡಲು ನಿರಾಕರಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.