ನವದೆಹಲಿ: ಕಳೆದ ವರ್ಷಕ್ಕೆ ಹೋಲಿಸಿದರೆ ಸೈಬರ್ ಕಳ್ಳರ ಪ್ರಮಾಣ 2022ರಲ್ಲಿ ಶೇ 5ರಷ್ಟು ಹೆಚ್ಚಿದ್ದು, ಸೈಬರ್ ದಾಳಿಗಾಗಿ ಪ್ರತಿನಿತ್ಯ 4 ಲಕ್ಷ ದುರುದ್ದೇಶಪೂರಿತ ಫೈಲ್‌ಗಳು ರವಾನೆಯಾಗುತ್ತಿವೆ ಎಂದು ವರದಿ ಹೇಳಿದೆ.
ಸೈಬರ್‌ಸೆಕ್ಯುರಿಟಿ ಸಂಸ್ಥೆ ಕಸ್ಪೆರೆಸ್ಕಿ ವರದಿ ಪ್ರಕಾರ, 2021ರಲ್ಲಿ ಪ್ರತಿನಿತ್ಯ 3,80,000 ದುರುದ್ದೇಶಪೂರಿತ ಫೈಲ್‌ಗಳು ಪತ್ತೆಯಾಗುತ್ತಿದ್ದವು. 2022ರಲ್ಲಿ ಸಂಸ್ಥೆ 12.2 ಕೋಟಿ ಫೈಲ್‌ಗಳನ್ನು ಪತ್ತೆ ಮಾಡಿದ್ದು, ಕಳೆದ ವರ್ಷಕ್ಕಿಂತ 60 ಲಕ್ಷ ಹೆಚ್ಚಾಗಿದೆ.
‘ಅಪಾಯಕಾರಿ ಸೈಬರ್ ಕಳ್ಳತನದ ಜಗತ್ತು ವೇಗಯುತವಾಗಿ ತನ್ನ ಮಿತಿ ಮತ್ತು ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಮುಂದಿನ ವರ್ಷ ಪ್ರತಿನಿತ್ಯ ರವಾನೆಯಾಗುವ ದುರುದ್ದೇಶಪೂರಿತ ಫೈಲ್‌ಗಳ ಸಂಖ್ಯೆ ಅರ್ಧ ಕೋಟಿ ತಲುಪಬಹುದು’ ಎಂದು ಕಸ್ಪರಸ್ಕಿಯ ವ್ಲಾಡಿಮರ್ ಕುಸ್ಕೊವ ಹೇಳಿದ್ದಾರೆ.
‘ಮಾಲ್ವೇರ್‌ಗಳನ್ನು ಸರ್ವೀಸ್ ಆಗಿ ಅಭಿವೃದ್ಧಿಗೊಳಿಸುತ್ತಿರುವುದು ಅತ್ಯಂತ ಅಪಾಯಕಾರಿ. ಈಗ ಯಾವುದೇ ವಂಚನೆ ಅನುಭವವಿಲ್ಲದವನು ಕೂಡ ಪ್ರೋಗ್ರಾಮಿಂಗ್‌ನಲ್ಲಿ ತಂತ್ರಜ್ಞಾನದ ಅರಿವಿಲ್ಲದೆ ಸಾಧನಗಳ ಮೇಲೆ ದಾಳಿ ನಡೆಸಬಹುದು’ ಎಂದು ಅವರು ತಿಳಿಸಿದ್ದಾರೆ.
ಮಾಲ್ವೇರ್ ಫೈಲ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವವರ ಸಂಖ್ಯೆ ಕೂಡ ಶೇ 142ರಷ್ಟು ಹೆಚ್ಚಾಗಿದೆ. ವಂಚಕರಿಗೆ ವಿಂಡೋಸ್ ಅತ್ಯಂತ ಸುಲಭವಾಗಿ ದಾಳಿ ನಡೆಸಬಹುದಾದ ವೇದಿಕೆಯಾಗಿದೆ. ಆಂಡ್ರಾಯ್ಡ್‌ನಲ್ಲಿ ಮಾಲ್ವೇರ್ ವಿತರಣೆ ಕೂಡ ಶೇ 10ರಷ್ಟು ಹೆಚ್ಚಾಗಿದೆ ಎಂದು ವರದಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.