ಬೆಂಗಳೂರು: ಕ್ರೆಡಿಟ್ ಸ್ಕೋರ್ ವರದಿಯನ್ನು ನೀಡುವ ಎಕ್ಸ್‌ಪೀರಿಯನ್ ಇಂಡಿಯಾ ಕಂಪನಿಯು, ವಾಟ್ಸ್‌ಆ್ಯಪ್ ನೆರವಿನಿಂದ ಕ್ರೆಡಿಟ್ ವರದಿ ತರಿಸಿಕೊಳ್ಳುವ ಸೇವೆಯನ್ನು ಆರಂಭಿಸಿದೆ.
ಈ ಕ್ರೆಡಿಟ್ ವರದಿ ತರಿಸಿಕೊಳ್ಳುವುದಕ್ಕೆ ಶುಲ್ಕ ಕೊಡಬೇಕಾಗಿಲ್ಲ ಎಂದು ಪ್ರಕಟಣೆ ತಿಳಿಸಿದೆ.
ಭಾರತದಲ್ಲಿ 48 ಕೋಟಿಗಿಂತ ಹೆಚ್ಚು ಜನ ವಾಟ್ಸ್‌ಆ್ಯಪ್ ಬಳಸುತ್ತಾರೆ. ‘ಕ್ರೆಡಿಟ್ ಸ್ಕೋರ್ ವರದಿಯನ್ನು ವಾಟ್ಸ್‌ಆ್ಯಪ್ ನೆರವಿನಿಂದ ತರಿಸಿಕೊಳ್ಳುವ ಸೇವೆಯನ್ನು ಆರಂಭಿಸುತ್ತಿರುವವರಲ್ಲಿ ನಾವೇ ಮೊದಲಿಗರು. ಕ್ರೆಡಿಟ್ ಸ್ಕೋರ್ ವರದಿಯು ಗ್ರಾಹಕರಲ್ಲಿ ಹಣಕಾಸಿನ ಶಿಸ್ತು ಮೂಡಿಸಲು ನೆರವಾಗುತ್ತದೆ’ ಎಂದು ಎಕ್ಸ್‌ಪೀರಿಯನ್ ಇಂಡಿಯಾ ಕಂಪನಿಯ ಅಧಿಕಾರಿ ನೀರಜ್ ಧವನ್ ಹೇಳಿದ್ದಾರೆ.
ಗ್ರಾಹಕರು ವಾಟ್ಸ್‌ಆ್ಯಪ್ ಮೂಲಕ 91 99200 35444 ಸಂಖ್ಯೆಗೆ Hi ಎಂದು ಸಂದೇಶ ಕಳುಹಿಸಿ, ಹೆಸರು, ಇ–ಮೇಲ್ ವಿಳಾಸ, ದೂರವಾಣಿ ಸಂಖ್ಯೆ ಹಂಚಿಕೊಂಡು ತಮ್ಮ ಕ್ರೆಡಿಟ್ ವರದಿ ಪಡೆದುಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.