ಮುಂಬೈ:ಗೋದ್ರೆಜ್ ಸಮೂಹದ ಗೋದ್ರೆಜ್ ಸೆಕ್ಯುರಿಟಿ ಸಲ್ಯೂಷನ್ಸ್‌ಭಾರತದ ಅತ್ಯಂತ ಸುರಕ್ಷಿತ ಹೋಮ್ ಕ್ಯಾಮೆರಾ ಶ್ರೇಣಿಯಾದ ‘ಸ್ಪಾಟ್‌ಲೈಟ್’ ಅನ್ನು ಬಿಡುಗಡೆ ಮಾಡಿದೆ. ಈ ಉತ್ಪನ್ನವನ್ನು ಭಾರತದಲ್ಲಿಯೇ ವಿನ್ಯಾಸಗೊಳಿಸಿ, ತಯಾರಿಸಲಾಗಿದ್ದು, ದೇಶದ ಗ್ರಾಹಕರಿಗೆ ಉತ್ತಮ ದರ್ಜೆಯ ದತ್ತಾಂಶ ಸಂರಕ್ಷಣೆ ಸೇವೆಯನ್ನು ನೀಡುತ್ತದೆ. ಇದರಿಂದಾಗಿ ಗ್ರಾಹಕರ ಮನೆ ಮತ್ತು ವೈಯಕ್ತಿಕ ಡೇಟಾ ಸುರಕ್ಷಿತವಾಗಿರಲಿದೆ.
ಸ್ಪಾಟ್‌ಲೈಟ್ ಶ್ರೇಣಿಯ ಕ್ಯಾಮರಾಗಳು ಅಮೇಜಾನ್ ವೆಬ್ ಸರ್ವೀಸ್‌ನ (ಎಡಬ್ಲ್ಯುಎಸ್) ವಿಶ್ವದರ್ಜೆಯ ಕ್ಲೌಡ್ ವ್ಯವಸ್ಥೆಯನ್ನು ಹತೋಟಿಯಲ್ಲಿಡುತ್ತವೆ. ಆ ಮೂಲಕ ಕ್ಯಾಮರಾ ಮತ್ತು ಕ್ಲೌಡ್ ನಡುವೆ ಡೇಟಾ ವರ್ಗಾವಣೆಯಲ್ಲಿ ಸುರಕ್ಷತೆಯನ್ನು ಕಾಯ್ದುಕೊಳ್ಳಬಹುದಾಗಿದೆ.
ಆಕರ್ಷಕವಿನ್ಯಾಸಹೊಂದಿರುವ ಈಶ್ರೇಣಿಯ ಕ್ಯಾಮೆರಾಗಳಲ್ಲಿ ವೈ-ವೈ ಅಳವಡಿಸಿಕೊಳ್ಳಬಹುದಾಗಿದ್ದು, ಮೊಬೈಲ್ ಆ್ಯಪ್ ಮೂಲಕವೂ ನಿಯಂತ್ರಿಸಬಹುದಾಗಿದೆ. ಆ್ಯಪ್ ಅನ್ನು ಸರಳವಾಗಿ ರೂಪಿಸಲಾಗಿದ್ದು, ಇದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ.
ಸೆರೆಯಾಗುವ ವಿಡಿಯೊಗಳು ಅಮೇಜಾನ್ ಕಿನೆಸಿಸ್ ವಿಡಿಯೊ ಸ್ಟ್ರೀಮ್ಸ್ ಮೂಲಕ, ಡಿವೈಸ್‌ನೊಂದಿಗೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆಗೆ ಸುರಕ್ಷಿತ ಮತ್ತು ಗೌಪ್ಯವಾಗಿ ವರ್ಗಾವಣೆಗೊಳ್ಳುತ್ತವೆ. ಕ್ಯಾಮೆರಾವನ್ನು ಸ್ಥಿರವಾಗಿರುವಂತೆ ಅಥವಾ ಅತ್ತಿತ್ತ ತಿರುಗುವಂತೆ ಮಾಡಬಹುದಾದ ಆಯ್ಕೆ ಗ್ರಾಹಕರಿಗಿದ್ದು, ತಮಗೆ ಅನುಕೂಲವಾಗುವಂತೆ ಸೆಟ್ ಮಾಡಿಕೊಳ್ಳಬಹುದಾಗಿದೆ. ಕ್ಯಾಮೆರಾ ಮೇಲಿಂದ ಕೆಳಕ್ಕೆ90 ಡಿಗ್ರಿಯಷ್ಟು ಮತ್ತು ಎಡದಿಂದ ಬಲಕ್ಕೆ355 ಡಿಗ್ರಿಯಷ್ಟು ತಿರುಗಬಲ್ಲುದಾಗಿದೆ.
ಈ ಉತ್ಪನ್ನಗಳ ಬೆಲೆ ₹ 4,999 ರಿಂದ ಆರಂಭವಾಗಲಿದ್ದು, ಗೋದ್ರೆಜ್ ಸೆಕ್ಯುರಿಟಿ ಸಲ್ಯೂಷನ್ಸ್ ವೆಬ್‌ಸೈಟ್, ಅಮೇಜಾನ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.