ನವದೆಹಲಿ: ಪ್ಲೇಸ್ಟೋರ್‌ನ ನಿಯಮಗಳಿಗೆ ಸಂಬಂಧಿಸಿದಂತೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಕೇಳಿರುವ ಪ್ರಶ್ನೆಗಳಿಗೆ ಉತ್ತರ ನೀಡಲು ಹೆಚ್ಚಿನ ಸಮಯ ಬೇಕು ಎಂದು ಕೋರಿ ಗೂಗಲ್ ಕಂಪನಿಯು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಡೆವಲಪರ್‌ಗಳಿಗೆ ಪ್ಲೇ ಬಿಲ್ಲಿಂಗ್ ವ್ಯವಸ್ಥೆ ಜೊತೆ ಜೋಡಣೆ ಮಾಡಿಕೊಳ್ಳಲು ಗೂಗಲ್ ಕಂಪನಿಯು 2022ರ ಅಕ್ಟೋಬರ್‌ವರೆಗೆ ಕಾಲಾವಕಾಶ ನೀಡಿದೆ. ಈ ಮೊದಲು 2022ರ ಮಾರ್ಚ್‌ವರೆಗೆ ಅವಕಾಶ ನೀಡಲಾಗಿತ್ತು.
ಪದೇ ಪದೇ ಮಾಡಬೇಕಿರುವ ಪಾವತಿಗಳಿಗೆ ಸಂಬಂಧಿಸಿದ ನಿಯಮಗಳು ದೇಶದಲ್ಲಿ ಬದಲಾವಣೆ ಆಗಿರುವ ಕಾರಣ, ಪ್ಲೇ ಬಿಲ್ಲಿಂಗ್ ವ್ಯವಸ್ಥೆಯಲ್ಲಿಯೂ ಬದಲಾವಣೆ ತರಲಾಗಿದೆ ಎಂದು ಗೂಗಲ್ ಕಂಪನಿಯು ಹೇಳಿತ್ತು. ಭಾರತದ ಡೆವಲಪರ್‌ಗಳು ಮತ್ತು ನವೋದ್ಯಮಗಳು ಗೂಗಲ್ ಪ್ಲೇ ಬಿಲ್ಲಿಂಗ್ ವ್ಯವಸ್ಥೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು. ಗೂಗಲ್ ಕಂಪನಿಯು ಭಾರತದ ಆ್ಯಪ್ ಡೆವಲಪರ್‌ಗಳು ತಮ್ಮ ಡಿಜಿಟಲ್ ಸೇವೆಗಳನ್ನು ಪ್ಲೇ ಬಿಲ್ಲಿಂಗ್ ವ್ಯವಸ್ಥೆಯ ಮೂಲಕವೇ ಮಾರಾಟ ಮಾಡಬೇಕು ಎಂದು ಒತ್ತಾಯಿಸುವಂತೆ ಇಲ್ಲ ಎಂದು ಅವರು ಹೇಳಿದ್ದರು.
ಇದನ್ನೂ ಓದಿ:ಗೂಗಲ್ ವಿರುದ್ಧ ತನಿಖೆಗೆ ಸಿಸಿಐ ಆದೇಶ
ಡಿಜಿಟಲ್ ಹೂರಣವನ್ನು ಪ್ಲೇಸ್ಟೋರ್ ಮೂಲಕ ಮಾರಾಟ ಮಾಡಲು ಬಯಸುವ ಆ್ಯಪ್‌ಗಳು ಪ್ಲೇ ಬಿಲ್ಲಿಂಗ್ ವ್ಯವಸ್ಥೆಯನ್ನು ಬಳಸಿಕೊಳ್ಳಬೇಕು ಮತ್ತು ಖರೀದಿ ಮೊತ್ತದ ನಿರ್ದಿಷ್ಟ ಪ್ರಮಾಣವನ್ನು ಶುಲ್ಕವಾಗಿ ಪಾವತಿಸಬೇಕು ಎಂದು ಗೂಗಲ್ ಹೇಳಿತ್ತು. ಗೂಗಲ್ ಪ್ಲೇ ಪಾವತಿ ವ್ಯವಸ್ಥೆ ಬಗ್ಗೆ ವಿಸ್ತೃತ ತನಿಖೆಗೆ ಸಿಸಿಐ ಆದೇಶ ನಿಡಿದ ಕುರಿತು ಪಿಟಿಐ ಸುದ್ದಿಸಂಸ್ಥೆ 2020ರ ನವೆಂಬರ್ 9ರಂದು ವರದಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.