ADVERTISEMENT

ಗೂಗಲ್ ಕ್ಯಾಲೆಂಡರ್

ರಶ್ಮಿ ಕಾಸರಗೋಡು
Published 28 ಆಗಸ್ಟ್ 2019, 19:30 IST
Last Updated 28 ಆಗಸ್ಟ್ 2019, 19:30 IST
   

ಸಾಮಾನ್ಯವಾಗಿ ದಿನಾಂಕ ನೆನಪಿಟ್ಟುಕೊಳ್ಳಬೇಕೆಂದರೆ ಕ್ಯಾಲೆಂಡರ್‌ನಲ್ಲಿ ಗುರುತು ಹಾಕುತ್ತಿದ್ದ ದಿನಗಳಿದ್ದವು. ಮನೆಯ ಗೋಡೆಯಲ್ಲಿ ತೂಗು ಹಾಕಿದ ಕ್ಯಾಲೆಂಡರ್‌ನಲ್ಲಿ ಪೆನ್, ಪೆನ್ಸಿಲ್ ಅಥವಾ ಸ್ಕೆಚ್ ಪೆನ್‌ನಿಂದ ಮಾಡಿದ ಗುರುತು ಮಾಡಿ, ಅಗತ್ಯ ಬಂದರೆ ಪುಟ್ಟದಾಗಿ ಒಂದು ನೋಟ್ ಬರೆದಿಡುತ್ತಿದ್ದೆವು. ಕೈಗೆ ಮೊಬೈಲ್ ಬಂದ ಮೇಲೆ ಎಲ್ಲವೂ ಮೊಬೈಲ್‌ನಲ್ಲಿ ಸೇವ್ ಮಾಡುವುದು ಅಭ್ಯಾಸವಾಯಿತು. ದಿನಾಂಕ ನೋಡಬೇಕಾದರೂ ಮೊಬೈಲ್, ಹುಟ್ಟುಹಬ್ಬ, ಆ್ಯನಿವರ್ಸರಿ ನೆನಪಿಸುವ ಕೆಲಸವನ್ನೂ ಮೊಬೈಲ್ ಮಾಡತೊಡಗಿದಾಗ ಬದುಕು ಇನ್ನಷ್ಟು ಸುಲಭವಾಗಿ ಬಿಟ್ಟಿತು.

ಗೂಗಲ್ ಕ್ಯಾಲೆಂಡರ್ ಕೂಡಾ ಇದೇ ರೀತಿ ಕೆಲಸ ಮಾಡುತ್ತದೆ. ಬ್ಯುಸಿ ಜೀವನದ ನಡುವೆ ಕಚೇರಿಯಲ್ಲಿನ ಮೀಟಿಂಗ್, ಕುಟುಂಬ ಮತ್ತು ಸ್ನೇಹಿತರು ಆಹ್ವಾನಿಸಿದ ಕಾರ್ಯಕ್ರಮಗಳ ಬಗ್ಗೆ ನೆನಪಿಡಲು ಅದೇ ರೀತಿ ಕಾರ್ಯಕ್ರಮ ಅಥವಾ ಮೀಟಿಂಗ್‌ಗೆ ಆಹ್ವಾನಿಸಲು ಗೂಗಲ್ ಕ್ಯಾಲೆಂಡರ್ ಸುಲಭ ಟೂಲ್.

ಹೀಗೆ ಮಾಡಿ

ADVERTISEMENT

ಗೂಗಲ್ ಖಾತೆಗೆ ಲಾಗಿನ್ ಆಗಿ

https://calendar.google.com/calendar/r ಕ್ಲಿಕ್ ಮಾಡಿ

ನಿಮ್ಮ ಎಡಭಾಗದಲ್ಲಿ ಪುಟ್ಟದಾಗಿ ಕ್ಯಾಲೆಂಡರ್ ಕಾಣಿಸುತ್ತದೆ. ಸ್ಕ್ರೀನ್‌ನಲ್ಲಿ ಒಂದು ವಾರದ ಕ್ಯಾಲೆಂಡರ್ ಕಾಣಿಸುತ್ತದೆ.

ಎಡಭಾಗದಲ್ಲಿ ಕೆಳಗೆ My Calendar ಕಾಣಿಸುತ್ತದೆ. Expand ಮಾಡುವುದಕ್ಕಾಗಿ ಕ್ಲಿಕ್ ಮಾಡಿ.

ಅಲ್ಲಿ ಹುಟ್ಟುಹಬ್ಬ, ರಿಮೈಂಡರ್, ನಿಮಗೆ ನೀಡಲಾದ ಕೆಲಸಗಳ ಲಿಸ್ಟ್ ಇದ್ದರೆ ಅದೂ ಕಾಣಿಸಿಕೊಳ್ಳುತ್ತದೆ. ಅಗತ್ಯವಿದ್ದರೆ ಡೆಸ್ಕ್‌ಟಾಪ್ ನೋಟಿಫಿಕೇಶನ್‌ಗೂ ಅನುಮತಿ ನೀಡಬಹುದು.

ಕ್ಯಾಲೆಂಡರ್ ಮೇಲೆ Cursor ಇಟ್ಟರೆ ನೀವು ಈಗಾಗಲೇ ಗುರುತಿಸಿದ ಅಥವಾ ನಿಮಗೆ ನಿಯೋಜಿಸಿರುವ ಕೆಲಸದ ಮಾಹಿತಿ ಕಾಣಿಸುತ್ತದೆ.

ಹೊಸತಾಗಿ ಯಾವುದಾದರೂ ಕಾರ್ಯಕ್ರಮಕ್ಕೆ ಗೆಳೆಯರನ್ನು ಆಹ್ವಾನಿಸಬೇಕಾದರೆ ಅಥವಾ ಮೀಟಿಂಗ್ ಕರೆಯಬೇಕಾದರೆ ಆ ದಿನ ಕ್ಲಿಕ್ ಮಾಡಿ. ಎಡಭಾಗದಲ್ಲಿ ಸಮಯ ಕಾಣಿಸುತ್ತದೆ. ಆ ಸಮಯದ ಮುಂದೆ ಇರುವ ಬಾಕ್ಸ್ ಕ್ಲಿಕ್ ಮಾಡಿ.

ಚಿಕ್ಕದೊಂದು ಬಾಕ್ಸ್ ತೆರೆದುಕೊಂಡು ಅಲ್ಲಿ Add Title ಎಂಬ ಜಾಗದಲ್ಲಿ ಕಾರ್ಯಕ್ರಮದ ಹೆಸರು ಟೈಪಿಸಿ. ಅದು Event, Reminder ಅಥವಾ Task - ಯಾವುದು ಎಂಬುದನ್ನು ನಮೂದಿಸಿ.

ಕಳೆಗೆ ಕಾರ್ಯಕ್ರಮ ನಡೆಯುವ ಜಾಗ, ವಿಷಯದ ವಿವರಣೆಯನ್ನು ನೀಡುವ ಬಾಕ್ಸ್‌ನಲ್ಲಿ ಅಗತ್ಯ ಮಾಹಿತಿ ನಮೂದಿಸಿ.

ನಿಮ್ಮ ಕಾರ್ಯಕ್ರಮಕ್ಕೆ ಆಹ್ವಾನಿಸಲು ಬಯಸುವ ಅತಿಥಿಗಳ ಹೆಸರು ಸೇರಿಸಲು Add Guest ಕ್ಲಿಕ್ ಮಾಡಿ. ಸೇವ್ ಮಾಡಿದ ಕೂಡಲೇ ಅತಿಥಿಗಳಿಗೆ ಇಮೇಲ್ ಮೂಲಕ ಆಹ್ವಾನ ಕಳಿಸಬೇಕೇ? ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ. ಅಲ್ಲಿ Send ಕ್ಲಿಕ್ ಮಾಡಿ.

ಗಮನಿಸಿ ನೀವು ಆಹ್ವಾನಿಸಿದ ಅತಿಥಿಗಳಿಗೆ ನಿಮ್ಮ ಕ್ಯಾಲೆಂಡರ್‌ನಲ್ಲಿ ಕಾರ್ಯಕ್ರಮವನ್ನು ಬದಲಾಯಿಸುವ, ಇತರರನ್ನು ಆಹ್ವಾನಿಸುವ ಮತ್ತು ಅತಿಥಿಗಳ ಪಟ್ಟಿಯನ್ನು ನೋಡುವ ಅವಕಾಶವನ್ನೂ ಕಲ್ಪಿಸುವ ಮತ್ತು ಅದನ್ನು ನಿರ್ಬಂಧಿಸುವ ಹಕ್ಕು ನಿಮಗಿರುತ್ತದೆ. ಅದಕ್ಕಾಗಿ Modify event, Invite others, See guest list ಆಯ್ಕೆಯನ್ನು ಚೆಕ್/ ಅನ್‌ಚೆಕ್ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.