ಬೆಂಗಳೂರು: ಸರ್ಚ್ ಇಂಜಿನ್ ಸೇವೆ ಒದಗಿಸುವ ಗೂಗಲ್ ಕ್ರೋಮ್, ಬ್ರೌಸರ್ ಅಪ್ಲಿಕೇಶನ್‌ನಲ್ಲಿದ್ದ 10 ದೋಷಗಳನ್ನು ಸರಿಪಡಿಸಿದೆ.
ಕಂಪ್ಯೂಟರ್‌ಗಳಲ್ಲಿ ಹೆಚ್ಚಿನ ಬಳಕೆಯಲ್ಲಿರುವ ಗೂಗಲ್ ಕ್ರೋಮ್‌ನಲ್ಲಿ ಹಲವು ಭದ್ರತಾ ಲೋಪವಿದ್ದು, ಅವುಗಳನ್ನು ಭದ್ರತಾ ಸಂಶೋಧಕರು ಪತ್ತೆ ಹಚ್ಚಿದ್ದರು.
ದೋಷವನ್ನು ಒಪ್ಪಿಕೊಂಡಿದ್ದ ಗೂಗಲ್, ನಂತರ ಅವುಗಳನ್ನು ಹಂತಹಂತವಾಗಿ ಸರಿಪಡಿಸಿದೆ.
ಗೂಗಲ್ ಕ್ರೋಮ್‌ನಲ್ಲಿದ್ದ ಭದ್ರತಾ ಲೋಪದಿಂದಾಗಿ ಹ್ಯಾಕರ್ಸ್ ಸುಲಭದಲ್ಲಿ ಬಳಕೆದಾರರ ಮಾಹಿತಿ ಕದಿಯುವ ಆತಂಕವಿತ್ತು. ಆದರೆ ಅವುಗಳನ್ನು ಸರಿಪಡಿಸಲಾಗಿದೆ ಎಂದು ಗೂಗಲ್ ಹೇಳಿದೆ.
ಜತೆಗೆ ದೋಷಗಳನ್ನು ಪತ್ತೆಹಚ್ಚಿದ್ದ ಸೈಬರ್ ತಂತ್ರಜ್ಞರಿಗೆ ಬಹುಮಾನದ ಮೊತ್ತವನ್ನು ಗೂಗಲ್ ನೀಡಿದೆ.
ಅಲ್ಲದೆ, ಗೂಗಲ್ ಕ್ರೋಮ್ ಬ್ರೌಸರ್ ಅಪ್‌ಡೇಟ್ ಬಿಡುಗಡೆ ಮಾಡಿದ್ದು, ವಿಂಡೋಸ್ ಬಳಕೆದಾರರು ಕೂಡಲೇ 107.0.5304.106/.107 ಆವೃತ್ತಿ ಡೌನ್‌ಲೋಡ್ ಮಾಡಿಕೊಂಡು ಅಪ್‌ಡೇಟ್ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.