ಬೆಂಗಳೂರು: ಗೂಗಲ್ ಕ್ರೋಮ್ ಬ್ರೌಸರ್ ಬಳಕೆದಾರರಿಗೆ ಹೊಸ ಸೆಕ್ಯುರಿಟಿ ಅಪ್‌ಡೇಟ್ ಒಂದನ್ನು ಬಿಡುಗಡೆ ಮಾಡಿದೆ.
ಬ್ರೌಸರ್‌ನಲ್ಲಿ ಭದ್ರತಾ ದೋಷ ಇರುವುದನ್ನು ಗಮನಿಸಿದ ಸೈಬರ್ ಸೆಕ್ಯುರಿಟಿ ಸಂಸ್ಥೆ, ಆ ಬಗ್ಗೆ ಗೂಗಲ್ ಸಂಸ್ಥೆಯನ್ನು ಎಚ್ಚರಿಸಿತ್ತು.
ಕೂಡಲೇ ಗೂಗಲ್ ಕ್ರೋಮ್ ಬ್ರೌಸರ್‌ಗಳಿಗೆ ನೂತನ ಸೆಕ್ಯುರಿಟಿ ಅಪ್‌ಡೇಟ್ ಅನ್ನು ಬಿಡುಗಡೆ ಮಾಡುವ ಮೂಲಕ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.
ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್ ಅಪ್ಲಿಕೇಶನ್‌ಗಳಲ್ಲಿ ಗೂಗಲ್ ಕ್ರೋಮ್ ಬಳಕೆದಾರರಿಗೆ ಹೊಸ ಬಗ್ ಫಿಕ್ಸ್ v105.0.5195.102 ಅಪ್‌ಡೇಟ್ ದೊರೆಯುತ್ತಿದೆ.
ಬಳಕೆದಾರರು, ಗೂಗಲ್ ಕ್ರೋಮ್‌ನಲ್ಲಿ ಸೆಟ್ಟಿಂಗ್ಸ್‌ನಲ್ಲಿರುವ ಎಬೌಟ್ ಕ್ರೋಮ್ ಆಯ್ಕೆ ಬಳಸಿಕೊಂಡು, ಅದರಲ್ಲಿ ಬ್ರೌಸರ್ ಅಪ್‌ಡೇಟ್ ಮಾಡಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.