ಬೆಂಗಳೂರು: ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿ ಭದ್ರತಾ ಲೋಪವೊಂದು ಕಂಡುಬಂದಿದ್ದು, ಕೂಡಲೇ ಅಪ್‌ಡೇಟ್ ಮಾಡಿಕೊಳ್ಳುವಂತೆ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ (ಸರ್ಟ್–ಇನ್) ಎಚ್ಚರಿಕೆ ನೀಡಿದೆ.
ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳಲ್ಲಿ ಬಳಸುವ ಗೂಗಲ್ ಕ್ರೋಮ್ ಬ್ರೌಸರ್‌ನಲ್ಲಿ ಇರುವ ದೋಷವೊಂದು ಕಂಡುಬಂದಿದ್ದು, ಸೈಬರ್ ಕ್ರಿಮಿನಲ್‌ಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ, ಅದರ ಮೂಲಕ ಕಂಪ್ಯೂಟರ್‌ಗೆ ವೈರಸ್, ಮಾಲ್ವೇರ್ ಪ್ರವೇಶಿಸಿ, ನಿಮ್ಮ ಪ್ರಮುಖ ದತ್ತಾಂಶ, ಖಾಸಗಿ ಮಾಹಿತಿ ಕದಿಯುವ ಸಾಧ್ಯತೆಯಿದೆ ಎಂದು ಸರ್ಟ್–ಇನ್ ಎಚ್ಚರಿಸಿದೆ.
ಈ ದೋಷ ಪತ್ತೆಯಾದ ಕೂಡಲೇ, ಗೂಗಲ್ ಭದ್ರತಾ ಅಪ್‌ಡೇಟ್ ಬಿಡುಗಡೆ ಮಾಡಿದೆ. ಜತೆಗೆ, ಎಲ್ಲ ಬಳಕೆದಾರರು ಗೂಗಲ್ ಕ್ರೋಮ್ ತಕ್ಷಣ ಅಪ್‌ಡೇಟ್ ಮಾಡಿಕೊಳ್ಳುವಂತೆ ಸೂಚಿಸಿದೆ.
ಹೊಸ ಗೂಗಲ್ ಕ್ರೋಮ್ ಅಪ್‌ಡೇಟ್ v101.0.4951.41 ಲಭ್ಯವಿದ್ದು, ಎಲ್ಲ ವಿಂಡೋಸ್, ಮ್ಯಾಕ್ ಮತ್ತು ಲಿನಕ್ಸ್ ಆಧಾರಿತ ಕಂಪ್ಯೂಟರ್‌ಗಳಲ್ಲಿ ಬಳಸಬಹುದಾಗಿದೆ.
ಕ್ರೋಮ್ ಬ್ರೌಸರ್ ಅಪ್‌ಡೇಟ್ ಮಾಡುವುದು ಹೇಗೆ?
ಡೆಸ್ಕ್‌ಟಾಪ್ ಕಂಪ್ಯೂಟರ್ ಬಳಕೆದಾರರು ಗೂಗಲ್ ಕ್ರೋಮ್ ಬ್ರೌಸರ್ ತೆರೆಯಿರಿ.
ಬಲ ತುದಿ ಮೇಲ್ಭಾಗದಲ್ಲಿರುವ ಮೂರು ಚುಕ್ಕಿಗಳ ಮೆನು ಆಯ್ಕೆ (Customize and control Google Chrome) ಕ್ಲಿಕ್ ಮಾಡಿ.
ನಂತರ ಸೆಟ್ಟಿಂಗ್ಸ್ ತೆರೆಯಿರಿ.
ಬಳಿಕ,
ಅಬೌಟ್ ಕ್ರೋಮ್ ಓಪನ್ ಮಾಡಿ.
ಅಲ್ಲಿ ಇರುವ ಗೂಗಲ್ ಕ್ರೋಮ್ ಅಪ್‌ಡೇಟ್ ನೌ ಎಂದಿರುವುದನ್ನು ಕ್ಲಿಕ್ ಮಾಡಿ.
ಅಪ್‌ಡೇಟ್ ಆದ ಬಳಿಕ, ರೀಲಾಂಚ್ ಮಾಡಿ.
ಗೂಗಲ್ ಕ್ರೋಮ್ Version 101.0.4951.54 ಎಂದು ಅಪ್‌ಡೇಟ್ ಆಗಿರುವುದನ್ನು ಖಚಿತಪಡಿಸಿಕೊಳ್ಳಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.