ADVERTISEMENT

ಗೂಗಲ್ ಮ್ಯಾಪ್ಸ್, ಸರ್ಚ್ ಆ್ಯಪ್‌ನಲ್ಲಿ ಕೋವಿಡ್ 19 ಲಸಿಕೆ ಕೇಂದ್ರದ ಮಾಹಿತಿ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 6:38 IST
Last Updated 16 ಏಪ್ರಿಲ್ 2021, 6:38 IST
ಗೂಗಲ್ ಮ್ಯಾಪ್ಸ್ ಮತ್ತು ಆ್ಯಪ್
ಗೂಗಲ್ ಮ್ಯಾಪ್ಸ್ ಮತ್ತು ಆ್ಯಪ್   

ದೇಶದಲ್ಲಿ ಕೋವಿಡ್ 19 ಸೋಂಕು ತಡೆಗೆ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ತಡೆಗೆ ಲಸಿಕೆ ಲಭ್ಯವಿದೆ.

45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ಮತ್ತು ಆರೋಗ್ಯ ಸೇವೆ ಹಾಗೂವಿವಿಧ ಇಲಾಖೆಗಳ ಮುಂಚೂಣಿ ಕಾರ್ಯಕರ್ತರು, ಸಿಬ್ಬಂದಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಲಾಗುತ್ತಿದೆ.

ಲಸಿಕೆ ಪಡೆದುಕೊಳ್ಳುವವರಿಗೆ ಅನುಕೂಲವಾಗುವಂತೆ, ಗೂಗಲ್ ಈಗ ದೇಶದಲ್ಲಿ ಗೂಗಲ್ ಮ್ಯಾಪ್ಸ್ ಮತ್ತು ಆ್ಯಪ್ ಮೂಲಕ ಸಮೀಪದ ಕೋವಿಡ್ ಲಸಿಕಾ ಕೇಂದ್ರದ ಕುರಿತು ಮಾಹಿತಿ ನೀಡುತ್ತಿದೆ.

ADVERTISEMENT

ಗೂಗಲ್ ಸರ್ಚ್ ಅಥವಾ ಮ್ಯಾಪ್ಸ್ ಮೂಲಕ, ‘ವ್ಯಾಕ್ಸಿನ್ ಸೆಂಟರ್ ನಿಯರ್ ಮಿ’ ಎಂದು ಟೈಪ್ ಮಾಡಿದರೆ, ನಿಮ್ಮ ಸಮೀಪದಲ್ಲಿರುವ ಲಸಿಕಾ ಕೇಂದ್ರದ ಕುರಿತ ಮಾಹಿತಿಯನ್ನು ಗೂಗಲ್ ಬಳಕೆದಾರರಿಗೆ ನೀಡುತ್ತದೆ.

ಅಷ್ಟೇ ಅಲ್ಲದೆ, ಲಸಿಕೆ ಕುರಿತ ಮಾಹಿತಿ, ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಸರ್ಕಾರಿ ಮಾಹಿತಿ ಹಾಗೂ ಕೋವಿಡ್ ಲಸಿಕಾ ಕೇಂದ್ರದ ಮ್ಯಾಪ್, ದೂರವಾಣಿ ಸಂಖ್ಯೆ, ಸಮಯ ವಿವರ ಕೂಡ ಗೂಗಲ್‌ನಲ್ಲಿ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.