ಬೆಂಗಳೂರು: ಗೂಗಲ್ ಮ್ಯಾಪ್ಸ್‌ನಲ್ಲಿ ಆಸ್ಪತ್ರೆಯಲ್ಲಿನ ಬೆಡ್ ಲಭ್ಯತೆ ಮತ್ತು ಆಮ್ಲಜನಕ ಕುರಿತ ವಿವರವನ್ನು ನೀಡುವ ಹೊಸ ಆಯ್ಕೆಯನ್ನು ಶೀಘ್ರದಲ್ಲಿ ನೀಡಲಿದೆ.
ಕೋವಿಡ್ 19 ವಿರುದ್ಧದ ಹೋರಾಟಕ್ಕೆ ನೆರವಾಗುವಂತೆ ಗೂಗಲ್ ಈಗಾಗಲೇ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಕೋವಿಡ್ ಲಸಿಕೆ ಕೇಂದ್ರಗಳ ಕುರಿತು ಈಗಾಗಲೇ ಗೂಗಲ್ ಮ್ಯಾಪ್ ಮೂಲಕ ವಿವರ ನೀಡುತ್ತಿದೆ. ಅಲ್ಲದೆ, ಕೋವಿಡ್ ಕೇರ್ ಸೆಂಟರ್ ಕುರಿತು ವಿವರ ಕೂಡ ಗೂಗಲ್ ಮ್ಯಾಪ್‌ನಲ್ಲಿ ದೊರೆಯಲಿದೆ.
ಉಳಿದಂತೆ ಹೊಸದಾಗಿ, ಗೂಗಲ್ ಮ್ಯಾಪ್ ಮೂಲಕ ಬಳಕೆದಾರರು ಕೋವಿಡ್ ಚಿಕಿತ್ಸಾ ಕೇಂದ್ರಗಳಲ್ಲಿನ ಬೆಡ್ ಲಭ್ಯತೆ, ಆಸ್ಪತ್ರೆ ವಿವರ ಪಡೆಯುವುದು ಮತ್ತು ಸ್ಥಳೀಯ ಬಳಕೆದಾರರು ಮಾಹಿತಿ ಹಂಚಿಕೊಳ್ಳುವುದು ಸಾಧ್ಯವಾಗಲಿದೆ.
ಸಾಮಾಜಿಕ ತಾಣಗಳಲ್ಲಿ ಬೆಡ್ ಲಭ್ಯತೆ, ಆಮ್ಲಜನಕ, ಕೋವಿಡ್ ಚಿಕಿತ್ಸೆ ಕುರಿತು ಅತ್ಯಂತ ಹೆಚ್ಚಿನ ಸಂಖ್ಯೆಯ ಜನರು ಹುಡುಕಾಟ ನಡೆಸುತ್ತಿದ್ದಾರೆ. ಹೀಗಾಗಿ ಅಧಿಕೃತ ಮಾಹಿತಿಯನ್ನು ಜನರಿಗೆ ಒದಗಿಸಲು ಗೂಗಲ್ ಮ್ಯಾಪ್ ಮೂಲಕ ಸೂಕ್ತ ವೇದಿಕೆ ಕಲ್ಪಿಸಲು ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.