ADVERTISEMENT

Google Meet: ಮೀಟಿಂಗ್‌ಗೆ ಮೊದಲೇ ವಿಡಿಯೊ, ಆಡಿಯೋ ಗುಣಮಟ್ಟ ಪರಿಶೀಲಿಸಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಫೆಬ್ರುವರಿ 2021, 15:58 IST
Last Updated 3 ಫೆಬ್ರುವರಿ 2021, 15:58 IST
ಗೂಗಲ್ ಮೀಟ್
ಗೂಗಲ್ ಮೀಟ್   

ಬೆಂಗಳೂರು: ಕೋವಿಡ್ 19 ಸಾಂಕ್ರಾಮಿಕದ ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದರಲ್ಲೂ, ಮನೆಯಿಂದಲೇ ಕಚೇರಿ ಕೆಲಸ, ಆನ್‌ಲೈನ್ ತರಗತಿ ಹೀಗೆ ವಿವಿಧ ಅಗತ್ಯಕ್ಕೆ ತಕ್ಕಂತೆ ವಿಡಿಯೊ ಕಾನ್ಫರೆನ್ಸ್ ಬಳಕೆ ಮಾಡಲಾಗುತ್ತದೆ. ಆದರೆ, ವಿಡಿಯೊ ಮೀಟಿಂಗ್, ತರಗತಿಯಲ್ಲಿ ಕೆಲವೊಮ್ಮೆ ವಿಡಿಯೊ ಮತ್ತು ಆಡಿಯೊ ಸಮಸ್ಯೆಯಾಗುವುದು ಇದೆ. ಅದಕ್ಕಾಗಿಯೇ ಗೂಗಲ್ ಮೀಟ್, ಮೀಟಿಂಗ್‌ಗೂ ಮೊದಲು ವಿಡಿಯೊ ಮತ್ತು ಆಡಿಯೊ ಗುಣಮಟ್ಟ ಪರಿಶೀಲಿಸುವ ಆಯ್ಕೆ ನೀಡುತ್ತಿದೆ.

ವಿಡಿಯೊ, ಆಡಿಯೊ ಪರಿಶೀಲಿಸಿ..

ಗೂಗಲ್ ಮೀಟ್ ತೆರೆದ ಬಳಿಕ, ಮೀಟಿಂಗ್ ಸೇರಿಕೊಳ್ಳುವ ಮೊದಲು, ಅಲ್ಲಿ ನೀವು ನಿಮ್ಮ ಇಂಟರ್‌ನೆಟ್ ಸಂಪರ್ಕ ಮತ್ತು ಪರಿಸರಕ್ಕೆ ಅನುಗುಣವಾಗಿ, ವಿಡಿಯೊ ಮತ್ತು ಆಡಿಯೊ ಗುಣಮಟ್ಟ ಪರಿಶೀಲಿಸಬಹುದು. ಮೀಟಿಂಗ್ ಆರಂಭಕ್ಕೂ ಮೊದಲೇ ನಿಮಗೆ ವಿಡಿಯೊ ಹಾಗೂ ಆಡಿಯೊ ಗುಣಮಟ್ಟ ತಿಳಿಯುವುದರಿಂದ, ಮತ್ತೆ ಸಮಸ್ಯೆ ಎದುರಿಸಬೇಕಾಗಿಲ್ಲ.

ADVERTISEMENT

ಪರಿಶೀಲನೆ ಹೇಗೆ?

ಗೂಗಲ್ ಮೀಟ್ ತೆರೆದು, ಮೀಟಿಂಗ್ ಕೋಡ್ ನಮೂದಿಸಿ, ಮೀಟಿಂಗ್ ಆರಂಭಕ್ಕೂ ಮೊದಲೇ ತೆರೆದುಕೊಳ್ಳುವ ಪೇಜ್‌ನಲ್ಲಿ ಚೆಕ್ ಯುವರ್ ಆಡಿಯೊ ಮತ್ತು ವಿಡಿಯೊ ಎಂದಿರುವಲ್ಲಿ ಕ್ಲಿಕ್ ಮಾಡಿ. ಬಳಿಕ, ಅಲ್ಲಿ ನಿಮಗೆ ನಿಮ್ಮ ಗೂಗಲ್ ಮೀಟ್‌, ವಿಡಿಯೊ ಮತ್ತು ಆಡಿಯೊ ಗುಣಮಟ್ಟ ಲಭ್ಯವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.