‘ಬದಲಾವಣೆ ಜಗದ ನಿಯಮ‘ ಎಂಬ ಮಾತಿನಲ್ಲಿ ನಂಬಿಕೆ ಇರಿಸಿರುವ ‘ಗೂಗಲ್‘ ಸಂಸ್ಥೆ, ತನ್ನ ಗುಂಪಿನಲ್ಲಿರುವ ಕೆಲವು ಅಪ್ಲಿಕೇಷನ್‌ಗಳನ್ನು ಹೊಸ ರೂಪದಲ್ಲಿ ತರಲು ಸಿದ್ಧತೆ ನಡೆಸಿದೆ. ಅವುಗಳಲ್ಲಿ ಮೊದಲಿಗೆ ‘ಫೋಟೊ ಆ್ಯಪ್‘ನ ಐಕಾನ್ ಬದಲಿಸಿದ್ದು, ಬಳಸುವ ವಿಧಾನವನ್ನೂ ಸರಳಗೊಳಿಸಿದೆ. ಹಳೆಯ ಫೋಟೊಗಳ ಸಂಗ್ರಹ ‘ಫೋಟೊ ಮೆಮೋರಿಸ್’ಗೆ ಹೆಚ್ಚಿನ ಪ್ರಾಧಾನ್ಯ ನೀಡಿದೆ.
ಐದು ವರ್ಷ ಹಳೆಯದಾದ ಗೂಗಲ್ ಫೋಟೊ ಆ್ಯಪ್ ಅನ್ನು ಸಾಕಷ್ಟು ಅಪ್‌ಡೇಟ್ ಮಾಡಲಾಗಿದೆ. ಐಕಾನ್ ಮತ್ತು ಫೀಚರ್‌ಗಳಲ್ಲಿ ಕುತೂಹಲಕಾರಿ ಬದಲಾವಣೆ ತರಲಾಗಿದೆ. ಇವು ನಿಜಕ್ಕೂ ಬಳಕೆದಾರರಿಗೆ ಹೊಸ ಅನುಭವ ನೀಡಲಿವೆ.
ಹಳೆಯ ಫೋಟೊಗಳನ್ನು ಸಂಗ್ರಹಿಸಿಡುವ ಈ ಫೋಟೊ ಆ್ಯಪ್ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಬಳಕೆದಾರರು ಹಳೆಯ ಮಧುರ ಕ್ಷಣಗಳನ್ನು ಮೆಲುಕು ಹಾಕಲು ಈ ಅಪ್ಲಿಕೇಷನ್‌ಗೆ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಅಪ್‌ಡೇಟೆಡ್ ಫೋಟೊ ಅಪ್ಲಿಕೇಷನ್ ನಲ್ಲಿ ಹಳೆಯ ಫೋಟೊಗಳನ್ನು ಹುಡುಕಲು ಸುಲಭವಾಗುವಂತೆ ಫೋಟೊಸ್, ಸರ್ಚ್ ಮತ್ತು ಲೈಬ್ರರಿ ಎಂಬ ಮೂರು ಹೊಸ ಟ್ಯಾಬ್‌ಗಳನ್ನು ಪರಿಚಯಿಸಿದೆ.
ಏನೇನು ಬದಲಾಗಿದೆ?
ಇಷ್ಟು ದಿನ ಬಳಕೆದಾರರಿಗೆ ಫ್ಯೋಟೊ ಆ್ಯಪ್ ಐಕಾನ್‌ನಲ್ಲಿ ಚಿರಪರಿಚಿತವಾಗಿದ್ದ ಕೆಂಪು, ಹಳದಿ, ಹಸಿರು ಮತ್ತು ನೀಲಿ ಬಣ್ಣದ ಗಿರಿಗಿಟ್ಲೆ ಗಾಳಿಚಕ್ರವನ್ನೇ ಉಳಿಸಿಕೊಳ್ಳಲಾಗಿದ್ದು, ಡಿಸೈನ್ ಬದಲಾಯಿಸಲಾಗಿದೆ. ತ್ರಿಕೋನಾಕೃತಿಯ ಚಕ್ರಗಳನ್ನು ಅರ್ಧ ಚಂದ್ರಾಕೃತಿಗೆ ಬದಲಾಸಿದೆ.
ಫೋಟೊ ಟ್ಯಾಬ್‌ನ ಥಂಬ್‌ನೇಲ್ಸ್ ಗಾತ್ರ ಸಾಕಷ್ಟು ಹಿಗ್ಗಿದ್ದು, ಫೋಟೊಗಳ ನಡುವಿನ ಜಾಗ ಕಿರಿದಾಗಿದೆ. ಇದರೊಂದಿಗೆ ಆಟೊ ಪ್ಲೇ ಫೀಚರ್ ಅಳವಡಿಸಲಾಗಿದ್ದು ಥಂಬ್‌ನೇಲ್ ಐಕಾನ್‌ನಲ್ಲಿಯೇ ಪ್ಲೇಯಿಂಗ್ ಮೋಡ್‌ನಲ್ಲಿ ವಿಡಿಯೊಗಳನ್ನೂ ವೀಕ್ಷಿಸಬಹುದು. ಕುಟುಂಬ ಸದಸ್ಯರು ಮತ್ತು ಆಪ್ತರಒಂದು ವಾರದ ಆಯ್ದ ಮತ್ತು ಉತ್ತಮ ಫೋಟೊಗಳನ್ನಷ್ಟೇ ಹೈಲೈಟ್ ಮಾಡವ ಹಾಗೂ ಬೇಡದ ಫೋಟೊಗಳನ್ನು ಮರೆಮಾಚುವ ಸೌಲಭ್ಯಗಳನ್ನೂ ಕೂಡ ಈ ಹೊಸ ಅಪ್‌ಡೇಟ್‌ನಲ್ಲಿ ನೀಡಲಾಗಿದೆ.
ನಿಮಗೆ ಬೇಕಾದ ಹಳೆಯ ನೆನಪುಗಳನ್ನು ತ್ವರಿತಗತಿಯಲ್ಲಿ ಹುಡುಕಲು ಸರ್ಚ್ ಟ್ಯಾಬ್‌ನಲ್ಲಿ ಹೊಸದಾಗಿ ಇಂಟರ್ ಆ್ಯಕ್ಟಿವ್ ಮ್ಯಾಪ್ ಫೀಚರ್ ಅನ್ನು ಹೊಸದಾಗಿ ನೀಡಲಾಗಿದೆ. ಈಫೀಚರ್ ಬಳಕೆದಾರರ ಬಹುದಿನದ ಬೇಡಿಕೆಯಾಗಿತ್ತು. ಅದನ್ನು ಗೂಗಲ್ ಈ ಬಾರಿಯ ಅಪ್‌ಡೇಟ್‌ನಲ್ಲಿ ಈಡೇರಿಸಿದೆ.
ಗೂಗಲ್ ಫೋಟೊ ಆ್ಯಪ್ ಬಿಡುಗಡೆಯಾದ ದಿನದಿಂದಲೇ ಈ ಫೀಚರ್ ಅಳವಡಿಸಲು ಸಾಕಷ್ಟು ಒತ್ತಾಯವಿತ್ತು. ಹೊಸ ಫೀಚರ್‌ಗಳು ಆ್ಯಂಡ್ರಾಯ್ಡ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಮತ್ತು ಐಒಎಸ್‌ನ ಆ್ಯಪಲ್ ಮೊಬೈಲ್‌ಗಳಿಗೆ, ಆ್ಯಪ್ ಸ್ಟೋರ್‌ನಲ್ಲಿ ಲಭ್ಯವಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.