ಬೆಂಗಳೂರು: ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಆ್ಯಪ್‌ಗಳನ್ನು ಒದಗಿಸುವ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಸಮಸ್ಯೆ ತರುವ ಮತ್ತಷ್ಟು ಆ್ಯಪ್‌ಗಳು ಪತ್ತೆಯಾಗಿವೆ.
ಆನ್‌ಲೈನ್‌ನಲ್ಲಿ ಸೈಬರ್ ದೋಷಗಳು ಮತ್ತು ಆ್ಯಪ್‌ಗಳಲ್ಲಿನ ಸಮಸ್ಯೆ ಬಗ್ಗೆ ವರದಿ ಮಾಡುವ ಡಾಕ್ಟರ್ ವೆಬ್ ಸೈಬರ್ ರಿಸರ್ಚ್ ತಂಡ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಕೆಲವೊಂದು ಆ್ಯಪ್‌ಗಳಲ್ಲಿ ದೋಷವಿದ್ದು, ಬಳಕೆದಾರರ ವೈಯಕ್ತಿಕ ವಿವರ ಕದಿಯುವ ಜತೆಗೆ ವೈರಸ್ ಹರಡುವ ಕೆಲಸ ಮಾಡುತ್ತಿವೆ ಎಂದು ಹೇಳಿದೆ.
ಗೂಗಲ್ ಪ್ಲೇ ಸ್ಟೋರ್‌ನಲ್ಲಿರುವ Tubebox, Bluetooth device auto-connect, Bluetooth & Wi-Fi & USB driver, Volume, Music Equalizer, Fast Cleaner & Cooling Master ಆ್ಯಪ್‌ಗಳು ದೋಷಪೂರಿತವಾಗಿದ್ದು, ಬಳಕೆದಾರರ ಸ್ಮಾರ್ಟ್‌ಫೋನ್‌ಗೆ ವೈರಸ್ ಹರಡುವ ಕೆಲಸ ಮಾಡುತ್ತಿವೆ ಎಂದು ವರದಿಯಾಗಿದೆ.
ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಬಳಸುತ್ತಿದ್ದರೆ, ಕೂಡಲೇ ಅನ್‌ಇನ್‌ಸ್ಟಾಲ್ ಮಾಡಿ, ಆ್ಯಪ್ ಡಿಲೀಟ್ ಮಾಡಿ ಎಂದು ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸೂಚನೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.