ADVERTISEMENT

ಫೇಸ್‌ಬುಕ್ ಬಳಕೆದಾರರ ಮಾಹಿತಿ ಕದಿಯುತ್ತಿವೆ ಆಂಡ್ರಾಯ್ಡ್ ಆ್ಯಪ್‌ಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜುಲೈ 2021, 12:45 IST
Last Updated 4 ಜುಲೈ 2021, 12:45 IST
ಗೂಗಲ್ ಪ್ಲೇ ಸ್ಟೋರ್
ಗೂಗಲ್ ಪ್ಲೇ ಸ್ಟೋರ್   

ಬೆಂಗಳೂರು: ಗೂಗಲ್ ಪ್ಲೇ ಸ್ಟೋರ್ ಮೂಲಕ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಸ್ಟಾಲ್ ಆಗಿರುವ ವಿವಿಧ ಆ್ಯಪ್‌ಗಳು ಫೇಸ್‌ಬುಕ್ ಬಳಕೆದಾರರ ಮಾಹಿತಿ ಕದಿಯುತ್ತಿವೆ ಎಂದು ‘ಡಾಕ್ಟರ್ ವೆಬ್’ ವರದಿ ಮಾಡಿದೆ.

58.5 ಲಕ್ಷಕ್ಕೂ ಅಧಿಕ ಬಾರಿ ಈ ಆ್ಯಪ್‌ಗಳು ಡೌನ್‌ಲೋಡ್ ಆಗಿದ್ದು, ಬಳಕೆದಾರರಿಗೆ ವಿವಿಧ ರೀತಿಯ ಸೈಬರ್ ಕ್ರೈಮ್‌ ವಂಚನೆಗಳನ್ನು ಮಾಡುತ್ತಿವೆ.

ಡಾಕ್ಟರ್ ವೆಬ್ ವರದಿಯ ಪ್ರಕಾರ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇರುವ ‘ಪ್ರಾಸೆಸಿಂಗ್ ಫೋಟೊ’, ‘ಪಿಐಪಿ ಫೋಟೊ’, ‘ಆ್ಯಪ್ ಕೀ ಲಾಕ್’, ‘ಆ್ಯಪ್ ಲಾಕ್ ಮ್ಯಾನೇಜರ್’, ‘ಲಾಕ್‌ಇಟ್ ಮಾಸ್ಟರ್’, ‘ಹೋರೋಸ್ಕೋಪ್ ಡೈಲಿ’, ‘ಹೋರೋಸ್ಕೋಪ್ ಪೈ’, ‘ಇನ್‌ವೆಲ್ ಫಿಟ್ನೆಸ್’ ಎಂಬ ಆ್ಯಪ್‌ಗಳು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿರುವ ಫೇಸ್‌ಬುಕ್ ಬಳಕೆದಾರರ ಮಾಹಿತಿ ಕದಿಯುತ್ತಿವೆ.

ADVERTISEMENT

ಕಳ್ಳಮಾರ್ಗದ ಮೂಲಕ ಗ್ರಾಹಕರ ವಿವರ ಕದ್ದು, ಅದನ್ನು ಸೈಬರ್ ಕ್ರೈಮ್ ದುರುದ್ದೇಶಕ್ಕೆ ಬಳಸಿಕೊಳ್ಳುತ್ತಿವೆ ಎಂದು ಡಾಕ್ಟರ್ ವೆಬ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.