ADVERTISEMENT

Android 13 | ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಗೂಗಲ್ ಹೊಸ ಓಎಸ್ ಲಭ್ಯವಿದೆ?

ಗೂಗಲ್ ನೂತನ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಓಎಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಆಗಸ್ಟ್ 2022, 8:28 IST
Last Updated 21 ಆಗಸ್ಟ್ 2022, 8:28 IST
ಗೂಗಲ್ ನೂತನ ಆ್ಯಂಡ್ರಾಯ್ಡ್
ಗೂಗಲ್ ನೂತನ ಆ್ಯಂಡ್ರಾಯ್ಡ್    

ಬೆಂಗಳೂರು: ಗೂಗಲ್, ನೂತನ ಆ್ಯಂಡ್ರಾಯ್ಡ್ 13 ಓಎಸ್ ಅಪ್‌ಡೇಟ್ ಅನ್ನು ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಿಗೆ ಬಿಡುಗಡೆ ಮಾಡಿದೆ.

ನೂತನ ಓಎಸ್ ಅಪ್‌ಡೇಟ್, ಹೆಚ್ಚಿನ ಖಾಸಗಿತನ ಮತ್ತು ಭದ್ರತೆ, ಬಹುಭಾಷಾ ಬೆಂಬಲ, ನೋಟಿಫಿಕೇಶನ್ ಕಂಟ್ರೋಲ್ ಸಹಿತ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಗೂಗಲ್ ಪಿಕ್ಸೆಲ್ ಸ್ಮಾರ್ಟ್‌ಫೋನ್‌ಗಳಿಗೆ ಆದ್ಯತೆಯಲ್ಲಿ ಮೊದಲಿಗೆ ಅಪ್‌ಡೇಟ್ ಲಭ್ಯವಾಗಿದೆ. ಮುಂದೆ, ಹಂತಹಂತವಾಗಿ ಇತರ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಅಪ್‌ಡೇಟ್ ದೊರೆಯಲಿದೆ.

ADVERTISEMENT

ಸ್ಯಾಮ್‌ಸಂಗ್, ಏಸಸ್, ಎಚ್‌ಎಂಡಿ ನೋಕಿಯಾ, ಐಕ್ಯೂ, ಮೊಟೊರೊಲಾ, ಒನ್‌ಪ್ಲಸ್, ಒಪ್ಪೊ, ರಿಯಲ್‌ಮಿ, ಶಾರ್ಪ್, ಸೋನಿ, ಟೆಕ್‌ನೊ, ವಿವೊ, ಶಓಮಿ ಸಹಿತ ಹಲವು ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಅಪ್‌ಡೇಟ್ ದೊರೆಯುತ್ತಿದೆ.

ಯಾವೆಲ್ಲ ಸ್ಮಾರ್ಟ್‌ಫೋನ್‌ಗಳಿಗೆ Android 13 ಲಭ್ಯವಿದೆ?

ಗೂಗಲ್
Pixel 4, 4a XL, 4a 5G, 4a 4G-LTE, Pixel 5, 5a 5G, Pixel 6, 6 Pro, ಮತ್ತು 6a ಸರಣಿ.

ಸ್ಯಾಮ್‌ಸಂಗ್
Galaxy S ಸರಣಿ:
Galaxy S22, S22 Ultra, S22 Plus, Galaxy S21, S21 Plus, S21 Ultra, S21 FE, S20 Ultra, S20+ 5G, S20+, S20 5G, S20 ಮತ್ತು ನಂತರದ ಮಾದರಿಗಳು

Galaxy Note ಸರಣಿ: Galaxy Note20 Ultra 5G, Note20 Ultra, Note20 5G, Note20, Note10+ 5G, Note10+, Note10 5G, Note10, Note10 Lite

Galaxy ಮಡಚಬಲ್ಲ ಸ್ಮಾರ್ಟ್‌ಫೋನ್: Galaxy Z Fold4, Z Flip4, Galaxy Z Fold3, Z Flip3, Galaxy Z Fold2 5G, Z Fold2, Z Flip 5G, Z Flip, Fold 5G, Fold.

Galaxy A ಸರಣಿ: Galaxy A71 5G, A71, A51 5G, A51, A90 5G

ಟ್ಯಾಬ್ಲೆಟ್: Galaxy Tab S8, S8+, S8 SE, S7+ 5G, Tab S7+, Tab S7 5G3, Tab S7, Tab S6 5G4, Tab S6, Tab S6 Lite.

ನೋಕಿಯಾ
ಅಪ್‌ಡೇಟ್ ಲಭ್ಯವಾಗಲಿರುವ ಮಾದರಿಗಳ ಪಟ್ಟಿ ಬಿಡುಗಡೆಯಾಗಿಲ್ಲ.

ಶಓಮಿ
ಶಓಮಿ 12 ಮತ್ತು 12 ಪ್ರೊ

ಒನ್‌ಪ್ಲಸ್
ಒನ್‌ಪ್ಲಸ್ 10 ಪ್ರೊ, ಒನ್‌ಪ್ಲಸ್ 10T

ಒಪ್ಪೊ
Reno8 Pro 5G, Reno8 5G, Reno7 Pro, Reno 7 5G, Reno 6 5G, F21 Pro, K10 5G, A76, Reno 6 Pro 5G, Reno6 Pro ದೀಪಾವಳಿ ಆವೃತ್ತಿ, Reno5 Pro 5G, F21 Pro 5G, F19 Pro+, K10, A96, Find X2, A74 5G, Oppo Pad Air, F19 Pro, F19, F19s, A77, A57, A55, A53s

ರಿಯಲ್‌ಮಿ
GT 2 Pro 5G

ವಿವೊ
Vivo X80 Pro

ಪೋಕೊ, ಮೊಟೊರೊಲಾ, ಟಿಸಿಎಲ್, ಐಕ್ಯೂ ಮತ್ತು ಏಸಸ್ ಸ್ಮಾರ್ಟ್‌ಫೋನ್‌ಗಳ ಪೈಕಿ ಅಪ್‌ಡೇಟ್ ಲಭ್ಯವಾಗಲಿರುವ ಮಾದರಿಗಳ ಪಟ್ಟಿ ಬಿಡುಗಡೆಯಾಗಿಲ್ಲ. ಉಳಿದಂತೆ, ಮುಂದಿನ ಹಂತದಲ್ಲಿ Android 13 ಓಎಸ್ ಅಪ್‌ಡೇಟ್ ದೊರೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.