ಬೆಂಗಳೂರು: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ಓಎಸ್ ಪರಿಚಯಿಸಲು ಗೂಗಲ್ ಮುಂದಾಗಿದೆ.
ಆಂಡ್ರಾಯ್ಡ್ 13 ಓಎಸ್ ಆವೃತ್ತಿ ಬಿಡುಗಡೆಯಾಗಲಿದ್ದು, ಅದರ ಪ್ರಿವ್ಯೂ ಆವೃತ್ತಿಯನ್ನು ಡೆವಲಪರ್‌ಗಳಿಗಾಗಿ ಬಿಡುಗಡೆ ಮಾಡಲಾಗಿದೆ.
ಬಳಕೆದಾರರ ಖಾಸಗಿತನ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುವುದು ಆಂಡ್ರಾಯ್ಡ್ 13 ವಿಶೇಷತೆಯಾಗಿದೆ ಎಂದು ಗೂಗಲ್ ಹೇಳಿದೆ.
ಡೆವಲಪರ್ ಆವೃತ್ತಿ ಬಿಡುಗಡೆಯಾದ ಬಳಿಕ, ಬೀಟಾ ಆವೃತ್ತಿ ಲಭ್ಯವಾಗಲಿದ್ದು, ಅದರಲ್ಲಿ ಪರಿಶೀಲನೆಯ ನಂತರ ಬಳಕೆದಾರರಿಗೆ ಹೊಸ ಓಎಸ್ ಅಪ್‌ಡೇಟ್ ದೊರೆಯಲಿದೆ.
ಆಂಡ್ರಾಯ್ಡ್ 12 ಕಳೆದ ಅಕ್ಟೋಬರ್‌ನಲ್ಲಿ ಪಿಕ್ಸೆಲ್ ಫೋನ್‌ಗಳಿಗೆ ಮೊದಲು ಲಭ್ಯವಾಗಿತ್ತು. ನಂತರ ಉಳಿದ ಬಳಕೆದಾರರಿಗೆ ದೊರೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.