ಬೆಂಗಳೂರು: ಗೂಗಲ್‌ನ ವಿವಿಧ ಸೇವೆಗಳನ್ನು ಬಳಸುತ್ತಿರುವ ಬಳಕೆದಾರರ ಮಾಹಿತಿಯನ್ನು ಇರಾನಿ ಮೂಲದ ಮಾಲ್ವೇರ್ ರಹಸ್ಯವಾಗಿ ಕದಿಯುತ್ತಿದೆ ಎಂದು ಗೂಗಲ್ ವರದಿ ಹೇಳಿದೆ.
ಸೈಬರ್ ಬೆದರಿಕೆ ಮತ್ತು ವಿಶ್ಲೇಷಣೆ ಕುರಿತು ವರದಿ ನೀಡುವ ಗೂಗಲ್‌ನ ಭದ್ರತಾ ತಂಡ, ಈ ಕುರಿತು ವರದಿ ಪ್ರಕಟಿಸಿದೆ.
ಹೈಪರ್‌ಸ್ಕೇಪ್ ಎನ್ನುವ ಟೂಲ್ ಒಂದನ್ನು ಇರಾನಿ ಹ್ಯಾಕರ್ಸ್ ಬಳಸುತ್ತಿದ್ದು, ‘ಚಾರ್ಮಿಂಗ್ ಕಿಟನ್‘ ಹೆಸರಿನ ಮಾಲ್ವೇರ್ ಮೂಲಕ ಗೂಗಲ್ ಬಳಕೆದಾರರನ್ನು ಗುರಿಯಾಗಿಸಿ, ಮಾಹಿತಿ ಕಳ್ಳತನ ಮಾಡಿದೆ.
ಹೈಪರ್‌ಸ್ಕೇಪ್ ಈ ಮೊದಲು ಜಿಮೇಲ್, ಯಾಹೂ ಮತ್ತು ಮೈಕ್ರೋಸಾಫ್ಟ್ ಔಟ್‌ಲುಕ್ ಬಳಕೆದಾರರ ಮಾಹಿತಿ ಕಳ್ಳತನ ಮಾಡಿರುವುದು ಪತ್ತೆಯಾಗಿತ್ತು.
ಬಳಕೆದಾರರ ಕಂಪ್ಯೂಟರ್‌ಗೆ ಹೈಪರ್‌ಸ್ಕೇಪ್ ಎನ್ನುವ ಮಾಲ್ವೇರ್ ಬಿಟ್ಟು, ಅದರ ಮೂಲಕ ಬ್ಯಾಂಕಿಂಗ್, ಹಣಕಾಸು ಮತ್ತು ವೈಯಕ್ತಿಕ ಮಾಹಿತಿಗೆ ಹ್ಯಾಕರ್ಸ್ ಕನ್ನ ಹಾಕುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.