ADVERTISEMENT

9 ಲಕ್ಷ ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದುಹಾಕಲಿದೆ ಗೂಗಲ್: ಕಾರಣ ಇಲ್ಲಿದೆ

ಐಎಎನ್ಎಸ್
Published 15 ಮೇ 2022, 13:08 IST
Last Updated 15 ಮೇ 2022, 13:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸ್ಯಾನ್ ಫ್ರಾನ್ಸಿಸ್ಕೊ: ಎರಡು ವರ್ಷಗಳಿಂದ ಅಪ್‌ಡೇಟ್ ಆಗದೇ ಇರುವ ಉಮಾರು 9 ಲಕ್ಷ ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದುಹಾಕಲು ಗೂಗಲ್ ಮುಂದಾಗಿದೆ.

ಈ ಪ್ರಕ್ರಿಯೆಯ ಬಳಿಕ ಪ್ಲೇಸ್ಟೋರ್‌ನಲ್ಲಿರುವ ಆ್ಯಪ್‌ಗಳ ಸಂಖ್ಯೆಯಲ್ಲಿ ಮೂರನೇ ಒಂದರಷ್ಟು ಕಡಿಮೆಯಾಗಲಿದೆ ಎಂದು ಗೂಗಲ್ ತಿಳಿಸಿದೆ.

ಎರಡು ವರ್ಷಗಳಿಂದ ಅಪ್‌ಡೇಟ್‌ ಆಗದೇ ಇರುವ ಸುಮಾರು 8,69,000 ಆ್ಯಪ್‌ಗಳು ಗೂಗಲ್ ಪ್ಲೇಸ್ಟೋರ್‌ನಲ್ಲಿ ಇವೆ. ಆ್ಯಪಲ್ ಕೂಡ ಇಂಥದ್ದೇ ಕ್ರಮ ಕೈಗೊಳ್ಳಲಿದೆ ಎನ್ನಲಾಗಿದೆ. ಆ್ಯಪಲ್ ಸ್ಟೋರ್‌ನಲ್ಲಿ ಎರಡು ವರ್ಷಗಳಿಂದ ಅಪ್‌ಡೇಟ್‌ ಆಗದೇ ಇರುವ ಸುಮಾರು 6,50,000 ಆ್ಯಪ್‌ಗಳಿವೆ.

ADVERTISEMENT

ಈ ಮಧ್ಯೆ, ಅಪ್‌ಡೇಟ್‌ ಆಗದೇ ಇರುವ ಆ್ಯಪ್‌ಗಳನ್ನು ಹೈಡ್ ಮಾಡಿ, ಅವುಗಳು ಅಪ್‌ಡೇಟ್ ಆದಲ್ಲಿ ಮರಳಿ ಬಳಕೆಗೆ ಲಭ್ಯವಾಗುವಂತೆ ಮಾಡುವ ಬಗ್ಗೆಯೂ ಗೂಗಲ್ ಚಿಂತನೆ ನಡೆಸಿದೆ ಎಂದು ಅಮೆರಿಕದ ತಂತ್ರಜ್ಞಾನ ಸುದ್ದಿ ಮಾಧ್ಯಮ ‘ಸಿಎನ್‌ಇಟಿ’ ವರದಿ ಮಾಡಿದೆ.

ಕಂಪನಿಗಳು ಈ ಕ್ರಮಗಳನ್ನು ಕೈಗೊಳ್ಳಲು ಬಳಕೆದಾರರ ಸುರಕ್ಷತೆಯೇ ಪ್ರಮುಖ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.