ಆಲ್ಫಬೆಟ್ ಒಡೆತನದ ಗೂಗಲ್, ಇಂಟರ್‌ನೆಟ್ ಸರ್ಚ್‌ನಿಂದ ಬಳಕೆದಾರರ ಫೋನ್ ನಂಬರ್, ಮನೆಯ ವಿಳಾಸ ಮತ್ತು ಇ-ಮೇಲ್ ವಿವರ ಸಹಿತ ಪ್ರಮುಖ ಮಾಹಿತಿಗಳನ್ನು ತೆಗೆದುಹಾಕುವಂತೆ ಕೋರಿಕೆ ಸಲ್ಲಿಸಿದರೆ, ಅದಕ್ಕೆ ಪ್ರತಿಯಾಗಿ ಸೂಕ್ತ ಕ್ರಮ ಕೈಗೊಳ್ಳಲಿದೆ.
ಬಳಕೆದಾರರ ಖಾಸಗಿತನ ಮತ್ತು ಮಾಹಿತಿ ಹಂಚುವಿಕೆ ಕುರಿತಂತೆ ಗೂಗಲ್, ಹೊಸ ಆಯ್ಕೆಗಳನ್ನು ಒದಗಿಸುತ್ತಿದೆ.
ಈ ಮೊದಲು ಗೂಗಲ್, ವೆಬ್‌ಪೇಜ್‌ಗಳು ಮತ್ತು ಅದರಲ್ಲಿ ಹಂಚಿಕೊಳ್ಳಲಾದ ಕೆಲವೊಂದು ಫೋಟೊ, ವಿಡಿಯೊಗಳನ್ನು ತೆಗೆದುಹಾಕುವಂತೆ ಕೋರಿಕೊಂಡರೆ ಅದಕ್ಕೆ ಮಾತ್ರ ಸಮ್ಮತಿಸುತ್ತಿತ್ತು. ಆದರೆ ಇದೀಗ, ಬಳಕೆದಾರರ ಫೋನ್ ನಂಬರ್, ಮನೆ ವಿಳಾಸ ಗೂಗಲ್‌ನಲ್ಲಿದ್ದು, ಅದನ್ನು ತೆಗೆದುಹಾಕುವಂತೆ ಕೋರಿಕೊಂಡರೆ, ಪೂರಕವಾಗಿ ಸಮ್ಮತಿಸಲಿದೆ.
ಬಳಕೆದಾರರಿಗೆ ಆನ್‌ಲೈನ್‌ನಲ್ಲಿ ಸುರಕ್ಷಿತ ಮತ್ತು ಖಾಸಗಿತನವನ್ನು ಒದಗಿಸುವುದು ಕಂಪನಿಯ ಗುರಿಯಾಗಿದೆ ಎಂದು ಗೂಗಲ್ ತಿಳಿಸಿದೆ.
ಫೋನ್ ನಂಬರ್, ಮನೆ ವಿಳಾಸ, ಖಾಸಗಿ ಮಾಹಿತಿ ತೆಗೆದುಹಾಕುವಂತೆ ದಿನವೂ ಗೂಗಲ್ ಹಲವಾರು ಕೋರಿಕೆಗಳನ್ನು ಸ್ವೀಕರಿಸುತ್ತಿದೆ. ಹೀಗಾಗಿ ಬಳಕೆದಾರರ ಅನುಕೂಲಕ್ಕಾಗಿ, ಕ್ರಮ ಕೈಗೊಳ್ಳಲು ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.