ಬೆಂಗಳೂರು: ಪ್ರಯಾಣದ ಸಂದರ್ಭದಲ್ಲಿ ಬಹಳಷ್ಟು ಮಂದಿ ಗೂಗಲ್ ಮ್ಯಾಪ್ಸ್ ಬಳಕೆ ಮಾಡಿರುತ್ತಾರೆ. ಅದರಲ್ಲಿನ ಟ್ರಾಫಿಕ್ ವೈಶಿಷ್ಟ್ಯಗಳು ಮತ್ತು ಬದಲಿ ರಸ್ತೆ ಆಯ್ಕೆಯನ್ನೂ ಗಮನಿಸಿರುತ್ತಾರೆ.
ಅದೇ ರೀತಿಯಲ್ಲಿ ಗೂಗಲ್ ಮತ್ತೊಂದು ಆಕರ್ಷಕ ವೈಶಿಷ್ಟ್ಯವನ್ನು ಬಳಕೆದಾರರಿಗೆ ಒದಗಿಸುತ್ತಿದೆ.
ಪ್ರಯಾಣದ ಸಂದರ್ಭದಲ್ಲಿ ವಿಪರೀತ ದಟ್ಟಣೆಯಿಂದ ಕೂಡಿರುವ ಮಾರ್ಗಗಳು ಮತ್ತು ಅತಿ ಹೆಚ್ಚು ಜನ ಸಂಚಾರ, ವಾಹನಗಳ ಸಂಚಾರ ಇರುವ ಮಾರ್ಗಗಳನ್ನು ಗುರುತಿಸಿ ಅದರ ವಿವರವನ್ನು ಮ್ಯಾಪ್‌ನಲ್ಲಿ ಗೂಗಲ್ ಒದಗಿಸಲಿದೆ.
ಇದರಿಂದ, ದೂರ ಪ್ರಯಾಣ ಮತ್ತು ನಗರದಲ್ಲಿ ಮ್ಯಾಪ್ ಬಳಸುವವರಿಗೆ ಅನುಕೂಲವಾಗಲಿದೆ.
ಪ್ರಸ್ತುತ ಗೂಗಲ್ ನೀಡುತ್ತಿರುವ ಟ್ರಾಫಿಕ್ ದಟ್ಟಣೆಯ ಮಾಹಿತಿಯನ್ನು ಮತ್ತೆ 100 ದೇಶಗಳ 10,000ಕ್ಕೂ ಅಧಿಕ ನಗರಗಳಿಗೆ ವಿಸ್ತರಿಸುವುದಾಗಿ ಗೂಗಲ್ ಹೇಳಿದೆ. ಇದರಿಂದ ನಿರ್ಧರಿತ ಪ್ರಯಾಣ ಕೈಗೊಳ್ಳುವವರಿಗೆ ಅನುಕೂಲವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.