ಸ್ಯಾನ್ ಫ್ರಾನ್ಸಿಸ್ಕೊ: ಅಂತರ್ಜಾಲದಲ್ಲಿ ವಿಷಯಗಳ ಹುಡುಕಾಟಕ್ಕೆ ಅತಿ ಹೆಚ್ಚು ಬಳಕೆಯಲ್ಲಿರುವ ಹುಡುಕು ತಾಣ ಗೂಗಲ್ 'ಕ್ರೋಮ್', ತನ್ನ 100ನೇ ಅವತಾರಕ್ಕೆ ಅಪ್‌ಡೇಟ್ ಆಗಿದೆ. 14 ವರ್ಷಗಳಿಂದ ಕ್ರೋಮ್ ಇದುವರೆಗೂ ನೂರು ಬಾರಿ ರೂಪ ಬದಲಿಸಿಕೊಂಡಿದೆ.
ಪ್ರಶ್ನೆಗಳಿಗೆ ಉತ್ತರಿಸುವ, ಲೆಕ್ಕಾಚಾರ ಮಾಡುವ ಹಾಗೂ ಹುಡುಕು ತಾಣವಾಗಿಯೂ ಬಳಸಬಹುದಾದ 'ಓಮ್ನಿಬಾಕ್ಸ್' ಜೊತೆಗೆ 2008ರಲ್ಲಿ ಕ್ರೋಮ್ ಅಂತರ್ಜಾಲ ಜಗತ್ತಿಗೆ ಪರಿಚಯವಾಗಿತ್ತು. ಗೂಗಲ್ ಕ್ರೋಮ್ ಸಾಮಾನ್ಯವಾಗಿ ಆರು ವಾರಗಳಿಗೆ ಒಮ್ಮೆ ಅಪ್‌ಡೇಟ್ ಆಗುತ್ತಿತ್ತು. ಆದರೆ, ಕಳೆದ ವರ್ಷದಿಂದ ಕಂಪನಿಯು ನಾಲ್ಕು ವಾರಗಳಿಗೊಮ್ಮೆ ಹೊಸ ಫೀಚರ್‌ಗಳೊಂದಿಗೆ ರೂಪಾಂತರಗೊಂಡ ಕ್ರೋಮ್ ಬಿಡುಗಡೆ ಮಾಡುತ್ತಿದೆ.
ವಿಂಡೋಸ್, ಮ್ಯಾಕ್, ಲೈನಕ್ಸ್, ಆ್ಯಂಡ್ರಾಯ್ಡ್ ಹಾಗೂ ಐಒಎಸ್ ಕಾರ್ಯಾಚರಣೆ ವ್ಯವಸ್ಥೆಗಳಲ್ಲಿ ಕ್ರೋಮ್‌ನ 100ನೇ ವರ್ಶನ್ ಅಪ್‌ಡೇಟ್ ಬಿಡುಗಡೆಯಾಗುತ್ತಿದೆ. ಈ ಬಾರಿ ಹೊಸ ವಿನ್ಯಾಸದಲ್ಲಿ ಕ್ರೋಮ್‌ನ ಲೋಗೊ ಹೊರ ಬರುತ್ತಿದೆ.
ಆ್ಯಂಡ್ರಾಯ್ಡ್ ಅಪ್ಲಿಕೇಷನ್‌ನಲ್ಲಿ ಬಳಕೆಯಾಗುತ್ತಿರುವ 'ಲೈಟ್ ಮೋಡ್' ಅನ್ನು ಹೊಸ ಕ್ರೋಮ್‌ನಿಂದ ಕೈಬಿಡಲಾಗುತ್ತಿದೆ. ಕಡಿಮೆ ಮೊಬೈಲ್ ಡೇಟಾ ಬಳಕೆ ಮತ್ತು ವೆಬ್ ಪುಟಗಳು ವೇಗವಾಗಿ ತೆರೆಯಲು ಅನುವಾಗಲು ಲೈಟ್ ಮೋಡ್ ಬಳಕೆಯಾಗುತ್ತಿದೆ.
ಇದನ್ನೂ ಓದಿ–ಡ್ಯೂಯೆಲ್ ಸಿಮ್ ದ್ವಂದ್ವಕ್ಕೀಗ ಕೊನೆಗಾಲ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.