ನವದೆಹಲಿ: ವಿಎಲ್‌ಸಿ ಮೀಡಿಯಾ ಪ್ಲೇಯರ್ ಮೇಲಿನ ನಿಷೇಧವನ್ನು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತೆಗೆದುಹಾಕಿದೆ.
ದಕ್ಷಿಣ ಏಷ್ಯಾದಲ್ಲಿ ಜನಪ್ರಿಯತೆ ಗಳಿಸಿರುವ ವಿಎಲ್‌ಸಿ ಮೀಡಿಯಾ ಪ್ಲೇಯರ್ ಮೇಲೆ ಸಚಿವಾಲಯ ಒಂಬತ್ತು ತಿಂಗಳ ನಿರ್ಬಂಧ ವಿಧಿಸಿತ್ತು.
ವಿಡಿಯೊಲಾನ್ ಸಾಫ್ಟ್‌ವೇರ್ ಕಂಪನಿ ಅಭಿವೃದ್ಧಿಪಡಿಸಿರುವ ವಿಎಲ್‌ಸಿ ಮೀಡಿಯಾ ಪ್ಲೇಯರ್ ವಿರುದ್ಧದ ನಿರ್ಬಂಧವನ್ನು ಇಂಟರ್‌ನೆಟ್ ಫ್ರೀಡಂ ಫೌಂಡೇಶನ್ (ಐಎಫ್‌ಎಫ್) ಪ್ರಶ್ನಿಸಿತ್ತು. ಜತೆಗೆ ಕಾನೂನು ಸಹಕಾರವನ್ನು ಒದಗಿಸಿತ್ತು.
ನಿರ್ಬಂಧ ತೆರವಾಗಿರುವ ಬಗ್ಗೆ ಐಎಫ್‌ಎಫ್ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದೆ.
ದೇಶದಲ್ಲಿ ವಿಎಲ್‌ಸಿ ಗರಿಷ್ಠ ಸಂಖ್ಯೆಯ ಡೌನ್‌ಲೋಡ್ ಮತ್ತು ಬಳಕೆದಾರರನ್ನು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.