ADVERTISEMENT

ಮೊಬೈಲ್‌ ಫೋನ್‌ ಪತ್ತೆಗೆ ಸರ್ಕಾರದಿಂದ ವೆಬ್‌ಸೈಟ್‌

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 13:58 IST
Last Updated 3 ಮಾರ್ಚ್ 2023, 13:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಚಿತ್ರದುರ್ಗ: ಕಳೆದು ಹೋದ ಮೊಬೈಲ್‌ ಫೋನ್‌ ಪತ್ತೆಗೆ ನೆರವಾಗುವಂತೆ ಕೇಂದ್ರ ಸರ್ಕಾರ ಸೆಂಟ್ರಲ್‌ ಇಕ್ಯುಪ್ಟ್‌ಮೆಂಟ್‌ ಐಡೆಂಟಿಟಿ ರಿಜಿಸ್ಟರ್‌ ವೆಬ್‌ಸೈಟ್‌ ರೂಪಿಸಿದೆ. ಇದರ ನೆರವಿನಿಂದ ಮೊಬೈಲ್‌ ಮಾಲೀಕರು ಕಳೆದು ಹೋದ ಫೋನ್‌ ಬ್ಲಾಕ್‌ ಮಾಡಬಹುದು.

ಸಾರ್ವಜನಿಕರು ಮೊಬೈಲ್‌ ಕಳವು ಅಥವಾ ಕಳೆದು ಹೋದ ಸಂದರ್ಭದಲ್ಲಿ https://www.ceir.gov.in ವೆಬ್‌ಸೈಟ್‌ನ ಸದುಪಯೋಗ ಪಡೆಯಬಹುದು. ಜಿಲ್ಲೆಯಲ್ಲಿ ಇದುವೆ ಸಿಇಐಆರ್‌ ಪೋರ್ಟಲ್‌ನಲ್ಲಿ 17 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್‌
ವರಿಷ್ಠಾಧಿಕಾರಿ ಕೆ. ಪರಶುರಾಮ್‌ ತಿಳಿಸಿದ್ದಾರೆ.

ಹಿರಿಯೂರು ತಾಲ್ಲೂಕಿನ ಯರಬಳ್ಳಿ ಗ್ರಾಮದ ರಜನಿಕಾಂತ್ ಅವರು ಕಳೆದು ಹೋದ ತಮ್ಮ ಫೋನ್‌ ವಿವರಗಳನ್ನು ಸಿಇಐಆರ್‌ ಪೋರ್ಟಲ್‌ನಲ್ಲಿ ನಮೂದಿಸಿದ್ದರು. ಅವರ ಮೊಬೈಲ್‌ ಫೋನ್ ಬೇರೆಯವರು ಉಪಯೋಗಿಸುತ್ತಿರುವುದನ್ನು ವೆಬ್‌ಸೈಟ್‌ ಮೂಲಕ ಐಮಂಗಲ ಪೊಲೀಸ್ ಠಾಣೆ ಪಿಎಸ್‌ಐ ಸುರೇಶ್‌ ಹಾಗೂ ಸಿಬ್ಬಂದಿ ಮೋಹನ್ ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಗುರುವಾರ ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಮಾಲೀಕರಿಗೆ ಹಸ್ತಾಂತರಿಸಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಡಿಎಆರ್‌ ಡಿವೈಎಸ್‌ಪಿ ಎಸ್‌.ಎಸ್‌. ಗಣೇಶ, ಎಎಸ್‌ಐ (ಗಣಕಯಂತ್ರ) ರಾಘವೇಂದ್ರ, ಪಿಎಸ್‌ಐ ಗುಡ್ಡಪ್ಪ, ಕಂಪ್ಯೂಟರ್‌ ಅಪರೇಟರ್‌ ನಟರಾಜ್‌ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.