ADVERTISEMENT

ಅಪಘಾತವಾದಾಗ ನೆರವಿಗೆ ಬರುವಂತೆ ಪೊಲೀಸರನ್ನು ಎಚ್ಚರಿಸುವ ಆ್ಯಪಲ್‌ ಐಫೋನ್‌ ಫೀಚರ್‌

ಆ್ಯಪಲ್ ನೂತನ ಸರಣಿಯ ಐಫೋನ್ 14 ‘ಕ್ರ್ಯಾಶ್ ಡಿಟೆಕ್ಷನ್’ ಫೀಚರ್

ಐಎಎನ್ಎಸ್
Published 1 ಫೆಬ್ರುವರಿ 2023, 12:57 IST
Last Updated 1 ಫೆಬ್ರುವರಿ 2023, 12:57 IST
ಐಫೋನ್ 14 ‘ಕ್ರ್ಯಾಶ್ ಡಿಟೆಕ್ಷನ್’ ಫೀಚರ್
ಐಫೋನ್ 14 ‘ಕ್ರ್ಯಾಶ್ ಡಿಟೆಕ್ಷನ್’ ಫೀಚರ್   

ಬೆಂಗಳೂರು: ಆ್ಯಪಲ್ ಐಫೋನ್ 14 ಸರಣಿಯಲ್ಲಿ ಹೊಸದಾಗಿ ‘ಕ್ರ್ಯಾಶ್ ಡಿಟೆಕ್ಷನ್’ ಫೀಚರ್ ಅನ್ನು ಪರಿಚಯಿಸಿದೆ. ಅಪಘಾತವಾದಾಗ ಅಥವಾ ತುರ್ತು ಸಂದರ್ಭದಲ್ಲಿ ಅದು ನಮ್ಮ ಆಪ್ತರಿಗೆ ಮತ್ತು ತುರ್ತು ಸೇವೆಗಳಿಗೆ ಫೋನ್ ನೆಟ್‌ವರ್ಕ್ ಇಲ್ಲದಿದ್ದರೂ, ಉಪಗ್ರಹ ನೆರವಿನಿಂದ ಮಾಹಿತಿ ನೀಡುತ್ತದೆ. ಜತೆಗೆ, ಸ್ಥಳದ ವಿವರವನ್ನೂ ಒದಗಿಸುತ್ತದೆ.

ಹೌದು, ಆಸ್ಟ್ರೇಲಿಯಾದ ತಾಸ್ಮೇನಿಯಾದಲ್ಲಿ ಕುದುರೆ ಗಾಡಿಗೆ ಟ್ರಕ್‌ ಡಿಕ್ಕಿ ಹೊಡೆದಿತ್ತು. ಘಟನೆ ನಡೆದ ಕೆಲವೇ ನಿಮಿಷಗಳಲ್ಲಿ ‘ಕ್ರ್ಯಾಶ್ ಡಿಟೆಕ್ಷನ್’ ಫೀಚರ್ ಪೊಲೀಸರಿಗೆ ಸಂದೇಶ ರವಾನಿಸಿದೆ. ಕೂಡಲೇ ಎಚ್ಚೆತ್ತ ಪೊಲೀಸರು ಎಂಟೇ ನಿಮಿಷದಲ್ಲಿ ಘಟನಾಸ್ಥಳಕ್ಕೆ ಧಾವಿಸಿ ಸಂತ್ರಸ್ತರಿಗೆ ಸಹಾಯ ಮಾಡಿದ್ದಾರೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ 14ರಿಂದ 20 ವರ್ಷದೊಳಗಿನ ಐವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ADVERTISEMENT

ಗಾಯಾಳುವಿನ ಮೊಬೈಲ್‌ನಿಂದ ‘ಕ್ರ್ಯಾಶ್ ಡಿಟೆಕ್ಷನ್’ ಫೀಚರ್ ಮೂಲಕ ಅಪಘಾತದ ಬಗ್ಗೆ ಸಂದೇಶ ಬಂತು. ತಕ್ಷಣ ನಾವು ಘಟನಾಸ್ಥಳಕ್ಕೆ ತೆರಳಿ ತ್ವರಿತವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡೆವು. ಈ ರೀತಿ ಅಪಘಾತಕ್ಕೀಡಾದ ಜನರು ಪ್ರಜ್ಞೆ ಕಳೆದುಕೊಂಡಂತಹ ಸಂದರ್ಭದಲ್ಲಿ ಕ್ರ್ಯಾಶ್ ಡಿಟೆಕ್ಷನ್ ಫೀಚರ್ ಸಮೀಪದ ಪೊಲೀಸರನ್ನು ಎಚ್ಚರಿಸುತ್ತದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2021ರ ಡಿಸೆಂಬರ್‌ನಲ್ಲಿ ಅಮೆರಿಕದಲ್ಲಿ ಜೋಡಿಯೊಂದರ ಪ್ರಾಣ ಉಳಿಸಲು ಕ್ರ್ಯಾಶ್ ಡಿಟೆಕ್ಷನ್ ಫೀಚರ್ ನೆರವಾಗಿತ್ತು. ಕ್ಲಾಯ್ ಫೀಲ್ಡ್ಸ್ ಮತ್ತು ಕ್ರಿಸ್ಟಿನ್ ಝೆಲಾಡ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ 300 ಅಡಿ ಆಳದ ಕಣಿವೆಗೆ ಬಿದ್ದಿತ್ತು. ಕಾರು ಕಣಿವೆಯಲ್ಲಿ ಸಿಲುಕಿಕೊಂಡಿದ್ದು, ಅದರೊಳಗಿಂದ ಜೋಡಿ ಹೊರಗಡೆ ಬರಲು ಸಾಧ್ಯವಾಗಿಲ್ಲ. ಅಲ್ಲದೆ, ತುರ್ತು ಕರೆ ಮಾಡಲು ಕೂಡ ಅವಕಾಶ ದೊರಕಿಲ್ಲ. ಅದೃಷ್ಟವಶಾತ್, ಕ್ರಿಸ್ಟಿನ್ ಬಳಿಯಿದ್ದ ಆ್ಯಪಲ್ ಐಫೋನ್ 14, ಅದಾಗಲೇ ಕಾರು ಅಪಘಾತಕ್ಕೀಡಾಗಿರುವುದನ್ನು ಗ್ರಹಿಸಿತ್ತು. ಮತ್ತು ತುರ್ತು ಸೇವೆಗೆ ಸಂದೇಶ ಕಳುಹಿಸಿತ್ತು.

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.