ADVERTISEMENT

ಇಸ್ರೇಲ್‌ ಗೂಢಚಾರಿಕೆ ಸಾಧನಗಳ ಮೇಲೆ ಮೈಕ್ರೊಸಾಫ್ಟ್‌ ನಿರ್ಬಂಧ

ಏಜೆನ್ಸೀಸ್
Published 16 ಜುಲೈ 2021, 9:44 IST
Last Updated 16 ಜುಲೈ 2021, 9:44 IST
ಹ್ಯಾಕಿಂಗ್‌–ಪ್ರಾತಿನಿಧಿಕ ಚಿತ್ರ
ಹ್ಯಾಕಿಂಗ್‌–ಪ್ರಾತಿನಿಧಿಕ ಚಿತ್ರ   

ರಿಚ್‌ಮಂಡ್‌ (ಅಮೆರಿಕ): ರಾಜಕಾರಣಿಗಳು, ಮಾನವ ಹಕ್ಕುಗಳ ಕಾರ್ಯಕರ್ತರು,ಪತ್ರಕರ್ತರು, ಶಿಕ್ಷಣ ತಜ್ಞರು ಮತ್ತು ರಾಜಕೀಯ ಭಿನ್ನಮತೀಯರು ಸೇರಿದಂತೆ ನೂರಕ್ಕೂ ಹೆಚ್ಚು ಜನರ ಮೇಲೆ ಗೂಢಚಾರಿಕೆ ಮಾಡುವುದಕ್ಕಾಗಿ ಇಸ್ರೇಲಿ ಹ್ಯಾಕರ್‌ ‘ಫೈರ್‌–ಹೈರ್’ಕಂಪನಿ ಅಭಿವೃದ್ಧಿಪಡಿಸಿದ ಸಾಧನಗಳನ್ನು ನಿರ್ಬಂಧಿಸಿರುವುದಾಗಿ ಮೈಕ್ರೋಸಾಫ್ಟ್ ಕಂಪನಿ ತಿಳಿಸಿದೆ.

ಇಸ್ರೇಲ್‌ ಕಂಪನಿಯ ಹ್ಯಾಕಿಂಗ್ ಪ್ರಯತ್ನಗಳ ಹಿಂದಿನ ರಹಸ್ಯ ಕುರಿತು ತನಿಖೆ ನಡೆಸಲು ಮೈಕ್ರೋಸಾಫ್ಟ್ ಕಂಪನಿ ಪರಿಷ್ಕೃತ ಸಾಫ್ಟ್‌ವೇರ್ ಬಿಡುಗಡೆ ಮಾಡುವ ಜತೆಗೆ, ಟೊರೊಂಟೊ ವಿಶ್ವವಿದ್ಯಾಲಯದ ಸಿಟಿಜನ್‌ ಲ್ಯಾಬ್‌ ಸಹಯೋಗದಲ್ಲಿ ಈ ಕುರಿತು ಕೆಲಸ ಆರಂಭಿಸಿದೆ.

ಸಿಟಿಜನ್ ಲ್ಯಾಬ್‌, ‘ಕ್ಯಾಂಡಿರು’ ಸೇರಿದಂತೆ ಕೆಲವೊಂದು ಹೆಸರುಗಳಿಂದ ಚಾಲ್ತಿಯಲ್ಲಿರುವ ಸಾಫ್ಟ್‌ವೇರ್‌ಗಳ ಕುರಿತು ತನಿಖೆ ಆರಂಭಿಸಿದೆ. ಇದು ಅಮೆಜಾನ್‌ ಕಾಡಿನಲ್ಲಿ ಕಂಡು ಬರುವ ಪರಾವಲಂಬಿ ಮೀನಿನ ಹೆಸರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.