ADVERTISEMENT

ಡಾರ್ಕ್‌ವೆಬ್‌ನಲ್ಲಿ ಮಾರಾಟಕ್ಕಿದೆ 50 ಕೋಟಿ ಲಿಂಕ್ಡ್‌ಇನ್ ಬಳಕೆದಾರರ ಮಾಹಿತಿ!

ಡೆಕ್ಕನ್ ಹೆರಾಲ್ಡ್
Published 9 ಏಪ್ರಿಲ್ 2021, 8:42 IST
Last Updated 9 ಏಪ್ರಿಲ್ 2021, 8:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಫೇಸ್‌ಬುಕ್‌ನ 50 ಕೋಟಿಗೂ ಅಧಿಕ ಬಳಕೆದಾರರ ಮಾಹಿತಿ ಸೋರಿಕೆಯಾದ ಬೆನ್ನಲ್ಲೇ ಮತ್ತೊಂದು ದತ್ತಾಂಶ ಸೋರಿಕೆ ಮಾಹಿತಿ ಬಹಿರಂಗವಾಗಿದೆ. ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡ್‌ಇನ್‌ನ 50 ಕೋಟಿಗೂ ಅಧಿಕ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎಂದು 'ಸೈಬರ್‌ನ್ಯೂಸ್' ವರದಿ ಮಾಡಿದೆ.

ಮಾಹಿತಿ ಸೋರಿಕೆಯಾಗಿರುವ ಬಳಕೆದಾರರ ಸಂಖ್ಯೆ ಲಿಂಕ್ಡ್‌ಇನ್‌ನ ಸಕ್ರಿಯ ಬಳಕೆದಾರರ ಮೂರನೇ ಎರಡರಷ್ಟಿದೆ ಎಂದು ಹೇಳಿರುವ ಸೈಬರ್‌ನ್ಯೂಸ್, ಸೋರಿಕೆಯಾದ ಮಾಹಿತಿ ಡಾರ್ಕ್‌ವೆಬ್‌ನಲ್ಲಿ ಮಾರಾಟಕ್ಕಿದೆ ಎಂದು ತಿಳಿಸಿದೆ.

ಬಾಟ್‌ಗಳ ಮೂಲಕ ವೆಬ್‌ ಸ್ಕ್ರಾಪಿಂಗ್ ಮಾಡಿಕೊಂಡು ಬಳಕೆದಾರರ ಮಾಹಿತಿಯನ್ನು ಸೋರಿಕೆ ಮಾಡಲಾಗಿದೆ. ಅಲ್ಲದೆ, ದಿ ಥ್ರೆಟ್ ಆಕ್ಟರ್, 20 ಲಕ್ಷ ಬಳಕೆದಾರರ ಮಾಹಿತಿಯನ್ನು ಸೋರಿಕೆಯ ಸ್ಯಾಂಪಲ್ ಎಂದು ಪೋಸ್ಟ್ ಮಾಡಿದ್ದು, ಅದರಲ್ಲಿ ಲಿಂಕ್ಡ್‌ಇನ್ ಬಳಕೆದಾರರ ಐಡಿ, ಪೂರ್ತಿ ಹೆಸರು, ಇ ಮೇಲ್ ಐಡಿ, ಫೋನ್ ನಂಬರ್, ಸಾಮಾಜಿಕ ತಾಣಗಳ ಲಿಂಕ್ ಸಹಿತ ಕೆಲಸ ಮತ್ತು ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ.

ADVERTISEMENT

ಸೋರಿಕೆಯಾದ ಮಾಹಿತಿಯನ್ನು ಹ್ಯಾಕರ್ ಮಾರಾಟಕ್ಕೆ ಇರಿಸಿದ್ದು, ಡಾಲರ್ ಮೂಲಕ ಹಾಗೂ ಬಿಟ್‌ಕಾಯಿನ್ ಬಳಸಿ ವಹಿವಾಟು ನಡೆಸುವುದಾಗಿ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಿಂಕ್ಡ್‌ಇನ್, ಈ ಬಗ್ಗೆ ತನಿಖೆ ಆರಂಭಿಸಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.