ನವದೆಹಲಿ: ದೇಶದಲ್ಲಿ ಮೊದಲ ವರ್ಷಾಚರಣೆಯ ಸಂಭ್ರಮದಲ್ಲಿರುವ ನಂ.1 ಕಿರು ವಿಡಿಯೊ ಆ್ಯಪ್ ಮೋಜ್, ಹೊಸ ಪ್ರತಿಭೆಗಳನ್ನು ಹುಡುಕಲು ಅತಿ ನೂತನ ಮೋಜ್ ಸೂಪರ್ ಸ್ಟಾರ್ ಅನ್ವೇಷಣೆಯನ್ನು (#MojSuperstarHunt) ಘೋಷಿಸಿದೆ.
ನಟನೆ, ನೃತ್ಯ, ಹಾಸ್ಯ, ಟ್ರಾನ್ಸಿಷನ್ ಹಾಗೂ ವಿಶಿಷ್ಟ ಪ್ರತಿಭೆ ಸೇರಿದಂತೆ ಐದು ವಿಷಯಗಳಲ್ಲಿ ಸ್ಪರ್ಧೆಯನ್ನು ಆಯೋಜಿಸಲಿದೆ.
ಪ್ರತಿ ತಿಂಗಳಲ್ಲಿ 120 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿರುವ ಮೋಜ್, ಡಿಜಿಟಲ್ ಯುಗದಲ್ಲಿ ಮುಂದಿನ ಪೀಳಿಗೆಯ ಉದಯೋನ್ಮುಖ ಪ್ರತಿಭೆಗಳಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಉತ್ತಮ ವೇದಿಕೆಯನ್ನು ಒದಗಿಸುತ್ತಿದೆ.
47 ದಿನಗಳ ಪರ್ಯಂತ ಎರಡು ಹಂತಗಳಲ್ಲಿ ಸ್ಪರ್ಧೆ ನಡೆಯಲಿದೆ. ಈ ಪೈಕಿ ಆಯ್ದ 200 ಸ್ಪರ್ಧಿಗಳು ಸೆಮಿಫೈನಲ್‌ಗೆ ಮತ್ತು 25 ಮಂದಿ ಫೈನಲ್‌ಗೆ ತೇರ್ಗಡೆ ಹೊಂದಲಿದ್ದಾರೆ. ಇವರಿಗೆ ಮಾರ್ಗದರ್ಶಕರ ನೆರವು ದೊರಕಲಿದೆ.
ಪ್ರತಿಭಾ ಅನ್ವೇಷಣೆಯು ಜುಲೈ 15ರಿಂದ ಆರಂಭವಾಗಲಿದ್ದು, ಆಗಸ್ಟ್ 31ರಂದು ಗ್ರ್ಯಾಂಡ್ ಫಿನಾಲೆಯೊಂದಿಗೆ ಕೊನೆಗೊಳ್ಳಲಿದೆ. ಪ್ರತಿ ವಿಭಾಗದ ಅಗ್ರ ಐದು ವಿಜೇತರು ತಲಾ ₹5 ಲಕ್ಷ ಮತ್ತು ಓರ್ವ ಕಿರೀಟಧಾರಿಯು ₹10 ಲಕ್ಷ ಗೆಲ್ಲುವ ಅವಕಾಶವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.