ADVERTISEMENT

FAU-G: ಬಿಡುಗಡೆಯಾದ ಒಂದೇ ದಿನದಲ್ಲಿ 10 ಲಕ್ಷಕ್ಕೂ ಅಧಿಕ ಡೌನ್‌ಲೋಡ್ ಕಂಡ ಫೌಜಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2021, 9:13 IST
Last Updated 27 ಜನವರಿ 2021, 9:13 IST
ಫೌಜಿ ಗೇಮ್
ಫೌಜಿ ಗೇಮ್   

ಬೆಂಗಳೂರು: ಪಬ್‌ಜಿ ನಿಷೇಧದ ಬಳಿಕ ದೇಶದಲ್ಲಿ ಸದ್ದು ಮಾಡಿದ್ದ ಫಿಯರ್‌ಲೆಸ್ ಆಂಡ್ ಯುನೈಟೆಡ್ ಗಾರ್ಡ್ಸ್ (FAU-G) ಫೌಜಿ ಗೇಮ್ ಕೊನೆಗೂ ಬಿಡುಗಡೆಯಾಗಿದೆ.

ಗಣರಾಜ್ಯೋತ್ಸವ ಆಚರಣೆಯಂದೇ ಹೊಸ ಗೇಮ್ ಗೂಗಲ್ ಪ್ಲೇ ಸ್ಟೋರ್‌ಗೆ ಲಗ್ಗೆ ಇರಿಸಿದ್ದು, ಒಂದೇ ದಿನದಲ್ಲಿ 10 ಲಕ್ಷಕ್ಕೂ ಅಧಿಕ ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಕಂಡಿದೆ. ಅಲ್ಲದೆ, ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಉತ್ತಮ ವಿಮರ್ಶೆ ಮತ್ತು ರೇಟಿಂಗ್ ಕೂಡ ನೀಡಿದ್ದಾರೆ.

ಆದರೆ ಗೇಮ್ ಇನ್ನಷ್ಟು ಆಸಕ್ತಿದಾಯಕವಾಗಿರಬೇಕು ಮತ್ತು ಸುಧಾರಿಸಬೇಕು, ಹಲವು ಅಂಶಗಳನ್ನು ಅಭಿವೃದ್ಧಿಪಡಿಸಿ, ಹೊಸ ಅಪ್‌ಡೇಟ್ ಬಿಡುಗಡೆ ಮಾಡಬೇಕು ಎಂದು ಗೇಮಿಂಗ್‌ಪ್ರಿಯರು ಒತ್ತಾಯಿಸಿದ್ದಾರೆ.

ADVERTISEMENT

ಫೌಜಿ ಗೇಮ್ ಆದಾಯದಲ್ಲಿ ಭಾರತ್ ಕೆ ವೀರ್ ಟ್ರಸ್ಟ್‌ಗೆ ಶೇ 20 ಪಾಲು ನೀಡಲಿದೆ. ಪ್ರಸ್ತುತ ಫೌಜಿ ಗೇಮ್ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ ಐಫೋನ್‌ಗೂ ಲಭ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.