ADVERTISEMENT

My FasTag App ಬಳಕೆ ಹೇಗೆ?

ರಶ್ಮಿ ಕಾಸರಗೋಡು
Published 27 ನವೆಂಬರ್ 2019, 14:52 IST
Last Updated 27 ನವೆಂಬರ್ 2019, 14:52 IST
   

ಡಿಸೆಂಬರ್ 1ರಿಂದ ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯವಾಗಲಿದೆ. ಫಾಸ್ಟ್ಯಾಗ್ ಅನ್ನು ನೀವು ನಿಮ್ಮ ವಾಹನದ ವಿಂಡ್ ಸ್ಕ್ರೀನ್‌ಗೆ ಅಂಟಿಸಿದರೆ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಗೇಟ್‌ಗಳಲ್ಲಿ ಆಟೊಮ್ಯಾಟಿಕ್ ಟೋಲ್ ಕಲೆಕ್ಷನ್ ಸಾಧ್ಯ.

ಏನಿದು ಫಾಸ್ಟ್ಯಾಗ್?

RFID (ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್) ಇರುವ ಸ್ಮಾರ್ಟ್ ಲೇಬಲ್‌ಗಳೇ FasTag. ಟೋಲ್ ಬೂತ್‌ಗಳಲ್ಲಿರುವ ಫಾಸ್ಟ್ಯಾಗ್ ಲೇನ್‌ನಲ್ಲಿ ರೀಡರ್ ಇರಲಿದೆ. ಈ ದಾರಿಯಲ್ಲಿ ವಾಹನ ಹಾದು ಹೋದಾಗ ವಾಹನಕ್ಕೆ ಅಂಟಿಸಿರುವ ಫಾಸ್ಟ್ಯಾಗ್ ರೀಡ್ ಆಗಿ ಫಾಸ್ಟ್ಯಾಗ್ ಖಾತೆಯಿಂದ ಶುಲ್ಕ ಪಾವತಿಯಾಗಲಿದೆ.

ADVERTISEMENT

ವಾಹನ ಮಾಲೀಕರು ಖಾತೆದಾರರಾಗಿರುವ ಬ್ಯಾಂಕ್‌ಗಳಿಂದ ಫಾಸ್ಟ್ಯಾಗ್ ಖರೀದಿಸಬಹುದಾಗಿದೆ. ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೊದಲಾದ ನೋಂದಾಯಿತ 23 ಬ್ಯಾಂಕ್‌ಗಳ ಆಯ್ದ ಶಾಖೆಗಳಲ್ಲಿ ಫಾಸ್ಟ್ಯಾಗ್ ಲಭ್ಯವಿದೆ.

ಇದಲ್ಲದೆ ಬ್ಯಾಂಕ್ ನ್ಯೂಟ್ರಲ್ (Bank Neutral ) ಫಾಸ್ಟ್ಯಾಗ್‌ಗಳು ಆಯ್ದ ಪೆಟ್ರೋಲ್ ಬಂಕ್ ಮತ್ತು ಅಮೆಜಾನ್, ಪೇಟಿಎಂ ಮತ್ತು ಏರ್‌ಟೆಲ್ ಥ್ಯಾಂಕ್ಸ್ App ನಲ್ಲಿ ಲಭ್ಯವಿವೆ. ಈ ಟ್ಯಾಗ್‌ಗಳನ್ನು ಯಾವುದೇ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಬಹುದಾಗಿದ್ದು, ಆನ್‌ಲೈನ್‌ನಲ್ಲೇ ರೀಚಾರ್ಜ್ ಮಾಡಬಹುದಾಗಿದೆ.

ಮೊದಲಿಗೆ ಬ್ಯಾಂಕ್‌ನ ನ್ಯೂಟ್ರಲ್ ಟ್ಯಾಗ್‌ಗಳನ್ನು My FasTag App ಮೂಲಕ ಆಕ್ಟಿವೇಟ್ ಮಾಡಬೇಕು. ಗೂಗಲ್ ಪ್ಲೇಸ್ಟೋರ್‌ನಿಂದ App ಡೌನ್‌ಲೋಡ್ ಮಾಡಿಕೊಂಡು ವಾಹನದ ಮಾಹಿತಿ ನಮೂದಿಸಿದರೆ FasTag ಆಕ್ಟಿವೇಟ್ ಆಗುತ್ತದೆ.

ಆ್ಯಪ್‌ನಲ್ಲಿ ಏನಿದೆ?

ಈ ಆ್ಯಪ್ ಮೂಲಕ ನೀವು ಫಾಸ್ಟ್ಯಾಗ್ ಖರೀದಿಸಬಹುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಫಾಸ್ಟ್ಯಾಗ್, ಬ್ಯಾಂಕ್ ನ್ಯೂಟ್ರಲ್ ಫಾಸ್ಟ್‌ಟ್ಯಾಗ್ ಮತ್ತು ಬ್ಯಾಂಕ್‌ಗಳಿಂದಲೂ ಫಾಸ್ಟ್ಯಾಗ್ ಖರೀದಿಸುವ ಆಪ್ಶನ್ ಆ್ಯಪ್‌ನಲ್ಲಿದೆ.

NHAI ಫಾಸ್ಟ್ಯಾಗ್ ಖರೀದಿ ಮಾಡುವುದಾದರೆ Buy NHAI ಫಾಸ್ಟ್ಯಾಗ್ ಕ್ಲಿಕ್ ಮಾಡಿ. ಇಲ್ಲಿ ಆನ್‌ಲೈನ್‌ನಲ್ಲಿ ಫಾಸ್ಟ್ಯಾಗ್ ಖರೀದಿಸುವ ಮತ್ತು ನಿಮ್ಮ ಹತ್ತಿರದಲ್ಲಿರುವ ಪಾಯಿಂಟ್ ಆಫ್ ಸೇಲ್ (PoS) ಯಾವುದು ಎಂಬುದರ ಬಗ್ಗೆಯೂ ಮಾಹಿತಿ ಸಿಗುತ್ತದೆ.

ನಿಮ್ಮ ಸಮೀಪವಿರುವ ಪಾಯಿಂಟ್ ಆಫ್ ಸೇಲ್ ಎಲ್ಲಿದೆ ಎಂದು ಅರಿಯಲು ನಿಮ್ಮ ರಾಜ್ಯ ಮತ್ತು ನಗರ ಇಲ್ಲವೇ ಪಿನ್‌ಕೋಡ್ ನಮೂದಿಸಿ ಸರ್ಚ್ ಮಾಡಬಹುದು.

ಆನ್‌ಲೈನ್‌ನಲ್ಲಿ ಖರೀದಿಸುವುದಾದರೆ ಈ ಆಪ್ಶನ್ ಅಮೆಜಾನ್ ವೆಬ್‌ಸೈಟ್‌ಗೆ ಲಿಂಕ್ ಆಗಿರುತ್ತದೆ. ಅಮೆಜಾನ್‌ನಲ್ಲಿ ನೀವು ಆರ್ಡರ್ ಮಾಡಿ ಫಾಸ್ಟ್ಯಾಗ್ ಖರೀದಿಸಬಹುದು.

ಹೀಗೆ ಆನ್‌ಲೈನ್‌ನಲ್ಲಿ ಖರೀದಿ ಮಾಡಿದ ನಂತರ ಫಾಸ್ಟ್ಯಾಗ್ ಅನ್ನು ಆಕ್ಟಿವೇಟ್ ಮಾಡಿ. ಎಲ್ಲಿಂದ ಖರೀದಿ ಮಾಡಿದಿರಿ ಎಂಬ ಆಪ್ಶನ್ ಕ್ಲಿಕ್ ಮಾಡಿದ ಕೂಡಲೇ ಅಮೆಜಾನ್ ಎಂಬ ಆಪ್ಶನ್ ತೋರಿಸುತ್ತದೆ. ಅಲ್ಲಿ QR code ಸ್ಕ್ಯಾನ್ ಮಾಡಿ ಫಾಸ್ಟ್ಯಾಗ್ ಆಕ್ಟಿವೇಟ್ ಮಾಡಬಹುದು.

ಆಕ್ಟಿವೇಟ್ ಆದನಂತರ ಪೇಮೆಂಟ್ ಆಯ್ಕೆ ಕ್ಲಿಕ್ ಮಾಡಿ. ಅಲ್ಲಿ ನೀವು ಯಾವ ರೀತಿಯಲ್ಲಿ ಪೇಮೆಂಟ್ ಮಾಡಲು ಇಚ್ಚಿಸುತ್ತೀರಿ ಎಂಬುದಕ್ಕೆ ಮೂರು ಆಯ್ಕೆಗಳಿರುತ್ತವೆ. ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿ ಅಗತ್ಯ ಮಾಹಿತಿ ನಮೂದಿಸಿ.

ಬ್ಯಾಂಕ್‌ನಿಂದ ಪಡೆಯುವ ಫಾಸ್ಟ್ಯಾಗ್‌ಗಳನ್ನು ಖರೀದಿಸುವುದಾದರೆ ನಿಮ್ಮ ಪ್ರದೇಶದಲ್ಲಿರುವ ಯಾವೆಲ್ಲ ಬ್ಯಾಂಕ್‌ಗಳಲ್ಲಿ ಫಾಸ್ಟ್ಯಾಗ್ ಲಭ್ಯ ಎಂಬ ಮಾಹಿತಿ ಇಲ್ಲಿ ತೋರಿಸುತ್ತದೆ.

UPI ಮೂಲಕ ರೀಚಾರ್ಜ್ ಮಾಡುವುದಾದರೆ ನಿಮ್ಮ ಫೋನ್ PSP (ಪೇಮೆಂಟ್ ಸರ್ವೀಸ್ ಪ್ರೊವೈಡರ್) ಜತೆ ನೋಂದಣಿಯಾಗಿರಬೇಕು. ಹೀಗೆ ನೋಂದಣಿಗೆ Accept ಬಟನ್ ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್‌ಗೆ ನೋಂದಣಿ ಬಗ್ಗೆ ಎಸ್‌ಎಂಎಸ್ ಬರುತ್ತದೆ. ಈಗಾಗಲೇ ನೋಂದಣಿ ಆಗಿದ್ದರೆ ನೀವು ಯಾವ ಬ್ಯಾಂಕ್‌ನಿಂದ ಫಾಸ್ಟ್ಯಾಗ್ ಖರೀದಿಸಿದ್ದೀರಿ ಎಂಬುದನ್ನು ನಮೂದಿಸಿ ಆಮೇಲೆ ನಿಮ್ಮ ವಾಹನದ ಮಾಹಿತಿ ನಮೂದಿಸಿ.

ಪೇಮೆಂಟ್ ವಿಧಾನ

ಫಾಸ್ಟ್ಯಾಗ್ ಆಕ್ಟಿವೇಟ್ ಆದನಂತರ ಬಳಕೆದಾರರು ಪೇಮೆಂಟ್ ಮಾಹಿತಿಯನ್ನು ನಮೂದಿಸಬೇಕು. ಬಳಕೆದಾರರು ತಮ್ಮ ಬ್ಯಾಂಕ್ ಖಾತೆಗೆ ಇದನ್ನು ನೇರವಾಗಿ ಲಿಂಕ್ ಮಾಡುವುದಾದರೆ ರೀಚಾರ್ಜ್ ಮಾಡುವ ಅಗತ್ಯವಿಲ್ಲ. ಬ್ಯಾಂಕ್ ಖಾತೆಯಲ್ಲಿ ಅಗತ್ಯ ಹಣ ಇದ್ದರೆ ಸಾಕು. ಟೋಲ್ ಹಣ ಅದರಿಂದ ಪಾವತಿಯಾಗುತ್ತದೆ. ಆದಾಗ್ಯೂ My FasTag app ನಲ್ಲಿ NHAI ಪ್ರೀಪೇಡ್ ಎಂಬ ಆಪ್ಶನ್‌ ಅನ್ನು ಕೂಡಾ ಬಳಸಬಹುದಾಗಿದೆ.

NHAI ಪ್ರೀಪೇಡ್ ವಾಲೆಟ್ ಬಳಕೆ ಹೇಗೆ ?

ಇತರ ವಾಲೆಟ್‌ಗಳ ರೀತಿಯೇ ಇದನ್ನು ಬಳಸಬಹುದು. ಮೊದಲು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮತ್ತು ಯುಪಿಐ ಮೂಲಕ ಈ ವಾಲೆಟ್‌ಗೆ ಹಣ ವರ್ಗಾಯಿಸಬಹುದು. ಇದಲ್ಲದೆ ಪೇಟಿಎಂ, ಫೋನ್ ಪೇ, ಗೂಗಲ್, ಮೈ ಏರ್‌ಟೆಲ್ Appನ್ನು ಪೇಮೆಂಟ್ ಆ್ಯಪ್‌ ಆಗಿ ಬಳಸಬಹುದು. ಈ ಆ್ಯಪ್‌ಗಳ ಮೂಲಕ FasTag ಖಾತೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ.

ರೀಚಾರ್ಚ್ ಹೇಗೆ?

ವಿವಿಧ ಪೇಮೆಂಟ್ ಆ್ಯಪ್‌ಗಳ ಮೂಲಕವೂ ಫಾಸ್ಟ್ಯಾಗ್ ರೀಚಾರ್ಜ್ ಮಾಡಿಕೊಳ್ಳಬಹುದು. ಪೇಟಿಎಂ ಬಳಸಿ ರೀಚಾರ್ಚ್ ಮಾಡುವುದಾದರೆ ಹೀಗೆ ಮಾಡಿ;

  • ಪೇಟಿಎಂ ಆ್ಯಪ್‌ ಓಪನ್ ಮಾಡಿ
  • More ಆಪ್ಶನ್‌ನಲ್ಲಿ Toll & FASTag ಆಯ್ಕೆ ಮಾಡಿ.
  • City Services ನಲ್ಲಿ Now you can buy, manage, and recharge FASTag ಎಂಬ ಆಪ್ಶನ್ ಕ್ಲಿಕ್ಕಿಸಿ ರೀಚಾರ್ಜ್ ಮಾಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.