ಮುಂಬೈ: ರಿಲಯನ್ಸ್ ಜಿಯೊ ಕಂಪನಿಯು ಜಿಯೊ ಫೈಬರ್ ಬ್ರಾಡ್‌ಬ್ಯಾಂಡ್‌ನ ಹೊಸ ಯೋಜನೆಗಳನ್ನು ಘೋಷಿಸಿದೆ. ಆರಂಭಿಕ ದರ ತಿಂಗಳಿಗೆ ₹399 ಪಾವತಿಸಿದರೆ ಅನ್‌ಲಿಮಿಟೆಡ್ ಡೇಟಾ ಸಿಗಲಿದೆ. ಮಂಗಳವಾರದಿಂದ ಇದು ಜಾರಿಗೆ ಬರಲಿದೆ ಎಂದು ಕಂಪನಿ ಹೇಳಿದೆ.
ಹೊಸ ಯೋಜನೆಯಡಿ ಗ್ರಾಹಕರು 150 ಎಂಬಿಪಿಎಸ್ ವೇಗದ ಡೇಟಾ, ಹೆಚ್ಚುವರಿ ಶುಲ್ಕವಿಲ್ಲದೆ ಟಾಪ್ 10 ಪೇಯ್ಡ್ ಒಟಿಟಿ ಅಪ್ಲಿಕೇಶನ್‌ಗಳಿಗೆ ಪ್ರವೇಶಾವಕಾಶವಿರುವ 4ಕೆ ಸೆಟ್ ಟಾಪ್ ಬಾಕ್ಸ್ ಹಾಗೂ ಉಚಿತ ವಾಯ್ಸ್ ಕಾಲಿಂಗ್ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಎಲ್ಲ ಹೊಸ ಗ್ರಾಹಕರಿಗೆ ಷರತ್ತುರಹಿತ 30 ದಿನಗಳ ಉಚಿತ ಟ್ರಯಲ್ ಘೋಷಿಸಲಾಗಿದೆ.
ಸೇವೆ ಇಷ್ಟವಾಗದಿದ್ದರೆ ಈ ಸೌಲಭ್ಯಗಳನ್ನು ಹಿಂದಿರುಗಿಸಬಹುದಾಗಿದೆ ಎಂದೂ ಕಂಪನಿ ಪ್ರಕಟಣೆ ತಿಳಿಸಿದೆ.
‘10 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಕಲ್ಪಿಸಿರುವ ಜಿಯೊ ಫೈಬರ್ ಈಗಾಗಲೇ ದೇಶದ ಅತಿದೊಡ್ಡ ಫೈಬರ್ ಪ್ರೊವೈಡರ್ ಆಗಿದೆಯಾದರೂ ಭಾರತ ಮತ್ತು ಭಾರತೀಯರಿಗಾಗಿ ನಮ್ಮ ದೂರದೃಷ್ಟಿ ಇನ್ನೂ ದೊಡ್ಡದಾಗಿದೆ. ನಾವು ಫೈಬರ್ ಅನ್ನು ಪ್ರತಿಯೊಂದು ಮನೆಗೂ ಕೊಂಡೊಯ್ಯಲು ಮತ್ತು ಕುಟುಂಬದ ಪ್ರತಿಯೊಬ್ಬ ಸದಸ್ಯರನ್ನೂ ಸಶಕ್ತರಾಗಿಸಲು ಬಯಸುತ್ತೇವೆ’ ಎಂದು ಜಿಯೋ ನಿರ್ದೇಶಕ ಆಕಾಶ್ ಅಂಬಾನಿ ಹೇಳಿದ್ದಾರೆ.
ಹೊಸ ಯೋಜನೆಯ ವಿವರ
* ₹399 - 30 ಎಂಬಿಪಿಎಸ್
* ₹699 - 100 ಎಂಬಿಪಿಎಸ್ (₹1,000 ಮೌಲ್ಯದ 11 ಒಟಿಟಿ ಆ್ಯಪ್‌ಗಳ ಚಂದಾದಾರಿಕೆ)
* ₹ 999 - 150 ಎಂಬಿಪಿಎಸ್ (₹1,500 ಮೌಲ್ಯದ 12 ಒಟಿಟಿ ಆ್ಯಪ್‌ಗಳ ಚಂದಾದಾರಿಕೆ)
* ಮೂರೂ ಯೋಜನೆಯಲ್ಲಿಯೂ ಅನಿಯಮಿತ ಡೇಟಾ ಮತ್ತು ವಾಯ್ಸ್ ಸೌಲಭ್ಯ ಇರಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.